ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲಮೊಮ್ಮೆ ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತಹ ಘಟನೆಗಳು ನಡೆಯುತ್ತವೆ. ಹೊಟ್ಟೆನೋವು ಎಂದು ಡಾಕ್ಟರ್ ಬಳಿ ಹೋಗುವ ರೋಗಿಗಳ ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರು ಅಚ್ಚರಿ ಪಡುವಂತಹ ಸನ್ನಿವೇಶಗಳು ನಡೆಯುತ್ತಲೇ ಇರುತ್ತವೆ. ಅಂತಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ.
ನಾಲ್ಕು ವರ್ಷದ ಬಾಲಕಿಯೋರ್ವಳು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಪರೀಕ್ಷಿಸಿ ಎಕ್ಸರೇ ರಿಪೋರ್ಟ್ ನೋಡಿದಾಗ ಬಾಲಕಿ ಹೊಟ್ಟೆಯಲ್ಲಿ ಮ್ಯಾಗ್ನೆಟಿಕ್ ಮಣಿಗಳಿರುವ ಆಘಾತಕಾರಿ ವಿಚಾರ ಬೆಳೆಕಿಗೆ ಬಂದಿದೆ.
ವಾಸ್ತವವಾಗಿ, ಈ ಘಟನೆ ಚೀನಾದಲ್ಲಿ ನಡೆದಿದೆ. ಬಾಲಕಿ ಅರಿವಿಲ್ಲದೆ ಈ ಮ್ಯಾಗ್ನೆಟಿಕ್ ಮಣಿಗಳನ್ನು ನುಂಗಿದ್ದು, ಈ ವಿಷಯ ಪೋಷಕರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ನಂತರ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಡಲು ಆರಂಭಿಸಿತ್ತು. ಕೂಡಲೇ ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಿದ್ದರು.
ಎಕ್ಸ್ ರೇ ಮಾಡಿಸಿ ನೋಡಿದಾಗ ರಿಪೋರ್ಟ್ ಕಂಡು ಬಾಲಕಿಯ ಪಾಲಕರು ಬೆಚ್ಚಿಬಿದ್ದಿದ್ದಾರೆ. ಬಾಲಕಿಯ ಹೊಟ್ಟೆಯಲ್ಲಿ ಸಣ್ಣ ಗೋಲಿಗಳಿದ್ದು, ಶಾಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು.
ಇದಾದ ಬಳಿಕ ವೈದ್ಯರು ಸತತ ಮೂರು ಗಂಟೆಗಳ ಕಾಲ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಿ ಬರೋಬ್ಬರಿ ಆಕೆಯ ಹೊಟ್ಟೆಯಿಂದ 61 ಮ್ಯಾಗ್ನೆಟಿಕ್ ಮಣಿಗಳನ್ನು ಹೊರತೆಗೆದಿದ್ದಾರೆ. ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
UPSC ಆಕಾಂಕ್ಷಿಗಳೇ, ‘ಪರೀಕ್ಷೆ ತಯಾರಿ’ ವೇಳೆ ನೀವು ಮಾಡುವ ಈ 3 ತಪ್ಪುಗಳನ್ನ ಸರಿ ಪಡೆಸಿಕೊಂಡ್ರೆ, ಪಾಸ್ ಆಗೋದು ಪಕ್ಕಾ