ರಾಜಸ್ಥಾನ: ತಾನು ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ವಿವಾಹವಾಗಿದಕ್ಕೆ ಮನನೊಂದು ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ.
ಭಿಲ್ವಾರಾ ಜಿಲ್ಲೆಯ ಮಹಾತ್ಮಾ ಗಾಂಧಿ ಆಸ್ಪತ್ರೆ ಆವರಣದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
राजस्थान : Girlfriend के लिए युवक ने की आत्महत्या की कोशिश, खुद को मारी गोली ,घायल अवस्था में युवक अस्पताल में भर्ती। pic.twitter.com/Yzn6sRtCBR
— Priya singh (@priyarajputlive) December 9, 2022
ಮೃತ ಯುವಕನನ್ನು ಯಶ್ ವ್ಯಾಸ್ ಎಂದು ಗುರುತಿಸಲಾಗಿದ್ದು, ಈತ ಆಸ್ಪತ್ರೆ ಆವರಣದಲ್ಲಿ ಗುಂಡು ಹಾರಿಸಿಕೊಂಡ ಕೆಲ ಹೊತ್ತಿನಲ್ಲೇ ದಾರಿ ಹೋಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯನ್ನು ಯುವಕನನ್ನು ಉದಯಪುರ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ಇಂದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕ ಮತ್ತು ಯುವತಿ ಒಂದೆ ಕಡೆ ಓದುತ್ತಿದ್ದರು. ಯುವಕ ತನ್ನ ಗೆಳತಿಯ ಮದುವೆಯಿಂದ ಅಸಮಾಧಾನಗೊಂಡಿರುವ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಎಂದು ತಿಳಿದು ಬಂದಿದೆ.
BIG NEWS: ‘ಕರ್ನಾಟಕ’ದಲ್ಲಿ ಅವಧಿಗೆ ಮುನ್ನವೇ ‘ವಿಧಾನಸಭೆ’ಗೆ ಚುನಾವಣೆ.? | Karnataka Assembly Election 2023
BREAKING NEWS: ವೈರಲ್ ಆಗಿರುವ ‘ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ’ ಅಧಿಕೃತವಲ್ಲ- ಕಸಾಪ ಸ್ಪಷ್ಟನೆ