ಕೆಎನ್ಎನ್ ಡಿಜಿಟಲ್ ಡೆಸ್ಕ್ : ತುಪ್ಪವನ್ನು ತಿನ್ನುವುದು ಒಳ್ಳೆಯದು. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳ ಸಿಗುತ್ತವೆ. ಆದರೆ ಅತಿಯಾಗಿ ಸೇವನೆ ದೇಹಕ್ಕೆ ಅಪಾಯ ಉಂಟು ಮಾಡುತ್ತದೆ. ಅದರಲ್ಲೂ ಕೆಲವು ಸಮಸ್ಯೆಗಳಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ತುಪ್ಪವನ್ನು ಸೇವಿಸಬಾರದು. ಈ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿಯುವುದು ಅಗತ್ಯವಾಗಿದೆ.
ಯಾವ ಜನರು ದೇಸಿ ತುಪ್ಪವನ್ನು ತಿನ್ನಬಾರದು?
ವೈದ್ಯರು ಈ ಕೆಳಗಿನ ಜನರು ತುಪ್ಪವನ್ನು ಸೇವಿಸದಂತೆ ಸಲಹೆ ನೀಡಿದ್ದಾರೆ.
-ನೀವು 8 ರಿಂದ 10 ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಮತ್ತು ದೈಹಿಕ ಚಟುವಟಿಕೆಗಳನ್ನು ಮಾಡದಿದ್ದರೆ, ಅವರಿಗೆ ದೇಸಿ ತುಪ್ಪದ ಸೇವನೆಯು ಸರಿಯಲ್ಲ.
-ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು, ದೇಸಿ ತುಪ್ಪದಿಂದ ದೂರವಿರಬೇಕು. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
-ನೀವು ಮಧುಮೇಹದಿಂದ ಬಳಲುತ್ತಿದ್ದರೆ, ದೇಸಿ ತುಪ್ಪವನ್ನು ತಪ್ಪಿಸಬೇಕು. ಅದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.
ಈ ಜನರಿಗೆ ದೇಸಿ ತುಪ್ಪ ಪ್ರಯೋಜನಕಾರಿ
– ದೈಹಿಕ ಚಟುವಟಿಕೆಗಳನ್ನು ಮಾಡುವವರಿಗೆ, ತುಪ್ಪವನ್ನು ತಿನ್ನುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
– ಯಾವುದಾದರೂ ಕ್ರೀಟಾಕೂಟದಂತಹ ಸ್ಪರ್ಧೆಯಲ್ಲಿ ಭಾಗವಹಿಸುವಂತರು ತುಪ್ಪವನ್ನು ಸೇವಿಸಬೇಕು.
– ತೆಳ್ಳಗಿರುವವರು, ತಮ್ಮ ತೂಕವನ್ನು ಹೆಚ್ಚಿಸಲು ಬಯಸುವವರು ತುಪ್ಪವನ್ನು ಸೇವಿಸಬೇಕು.
BREAKING NEWS: ವೈರಲ್ ಆಗಿರುವ ‘ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ’ ಅಧಿಕೃತವಲ್ಲ- ಕಸಾಪ ಸ್ಪಷ್ಟನೆ