ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂದು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರ 76ನೇ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನವನ್ನು ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಆಚರಿಸಿಕೊಂಡಿದ್ದಾರೆ.
ಸದ್ಯ ಸೋನಿಯಾ ಗಾಂಧಿಯವರು ಮಕ್ಕಳ ಜೊತೆ ನಾಲ್ಕು ದಿನಗಳ ರಾಜಸ್ಥಾನ ಪ್ರವಾಸ ಕೈಗೊಂಡಿದ್ದು, ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಸಫಾರಿಯನ್ನು ಆನಂದಿಸುತ್ತಿರುವ ಫೋಟೋವನ್ನು ಇಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ತೆರೆದ ಜೀಪಿನಲ್ಲಿ ತಲೆಯನ್ನು ಸ್ಕಾರ್ಫ್ನಲ್ಲಿ ಮುಚ್ಚಿಕೊಂಡು ಚಳಿಗಾಲದ ಬಟ್ಟೆಗಳನ್ನು ಧರಿಸಿ, ಸೋನಿಯಾ ಗಾಂಧಿ ಸಫಾರಿ ಜೀಪ್ನ ಮುಂಭಾಗದಲ್ಲಿ ಚಾಲಕನೊಂದಿಗೆ ಕುಳಿತಿದ್ದರೆ. ರಾಹುಲ್ ಗಾಂಧಿ ಭದ್ರತಾ ಅಧಿಕಾರಿಗಳೊಂದಿಗೆ ಅವರ ಹಿಂದೆ ಕುಳಿತಿರುವುದು ಕಂಡುಬಂದಿದೆ.
ಇನ್ನು ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ, ಸೇರಿದಂತೆ ಅನೇಕ ರಾಜಿಕೀಯ ನಾಯಕರು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಇದರ ಜೊತೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಸಚಿನ್ ಪೈಲಟ್, ರಣದೀಪ್ ಸುರ್ಜೆವಾಲಾ ಮತ್ತು ಶಶಿ ತರೂರ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಅವರ ಜನ್ಮದಿನದಂದು ಪಕ್ಷದ ಮಾಜಿ ಮುಖ್ಯಸ್ಥರಿಗೆ ಶುಭ ಹಾರೈಸಿದ್ದಾರೆ.
ಸದ್ಯ ರಾಜಸ್ಥಾನದ ಕೋಟಾ ಜಿಲ್ಲೆಯ ಮೂಲಕ ಸಾಗುತ್ತಿರುವ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಮುನ್ನಡೆಸುತ್ತಿದ್ದಾರೆ. ಗುರುವಾರ, ಪಕ್ಷವು ಮೆರವಣಿಗೆಯನ್ನು ವಿರಾಮಗೊಳಿದ್ದು, ಡಿಸೆಂಬರ್ 10 ರಂದು ಪುನರಾರಂಭವಾಗಲಿದೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಜಾಥಾವು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶವನ್ನು ದಾಟುವ ಮೊದಲು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣವನ್ನು ಒಳಗೊಂಡಿದೆ. ಇದು ಫೆಬ್ರವರಿ 2023 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.
ವಾಟ್ಸಾಪ್ ‘ಅವತಾರ್’ ವೈಶಿಷ್ಟ್ಯ ; ನಿಮ್ಮ ಸ್ವತಃ ಅವತಾರ ನೀವೇ ರಚಿಸಿ, ಎಮೋಜಿ ಬದಲಿಗೆ ಕಳುಹಿಸಿ
ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ ನಿಗಮಗಳು ನಿಷ್ಕ್ರೀಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ