ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತದ ಅತ್ಯಂತ ಜನಪ್ರಿಯ ಪೇಯವೆಂದರೆ ಟೀ ಅಥವಾ ಚಹಾ. ಬೆಳಗ್ಗಿನ ಪ್ರಥಮ ಆಹಾರವಾಗಿ ಪ್ರಾರಂಭಿಸಿ ದಿನದ ಕಟ್ಟಕಡೆಯ ಆಹಾರವಾಗಿ ಸೇವಿಸಲ್ಪಡುತ್ತಾ ಬಂದಿರುವ ಪೇಯವೇ ಚಹಾ.
BREAKING NEWS : ಇಸ್ರೋ ನಡೆಸಿದ ಹೈಪರ್ಸಾನಿಕ್ ವಾಹನ ಪ್ರಯೋಗ ಪರೀಕ್ಷೆ ಯಶಸ್ವಿ | Hypersonic Vehicle Trials
ಭಾರತೀಯರಿಗೆ ಬೆಳಗಾಗುವುದೇ ಚಹಾದಿಂದ. ಸಂಜೆಯಾದರೆ ನಾಲ್ಕೈದು ಜನರು ಸುತ್ತ ಕುಳಿತು ಮಾತನಾಡುತ್ತಾ ಟೀ ಕುಡಿಯಲು ತೊಡಗುತ್ತಾರೆ. ಟೀ ಮಾಡದ ಮನೆ, ಅಥವಾ ಹೊಟೇಲ್ ಭಾರತದಲ್ಲಿ ಸಿಗಲು ಕಾಣುವುದು ಕಡಿಮೆ. ಎಂಥಹಾ ಗಲ್ಲಿ ಹೋಟೇಲಾದರೂ ಸರಿ, ಫೈವ್ ಸ್ಟಾರ್ ಹೊಟೇಲಾದರೂ ಸರಿ. ಅಲ್ಲಿ ಟೀಯಂತೂ ಇದ್ದೇ ಇರುತ್ತದೆ. 10 ರೂಪಾಯಿನಿಂದ ಹಿಡಿದು ಸಾವಿರವನ್ನೂ ದಾಟಿದ ಬೆಲೆಯ ಚಹಾಗಳು ಭಾರತದಲ್ಲಿ ಸಿಗುತ್ತವೆ.
BREAKING NEWS : ಇಸ್ರೋ ನಡೆಸಿದ ಹೈಪರ್ಸಾನಿಕ್ ವಾಹನ ಪ್ರಯೋಗ ಪರೀಕ್ಷೆ ಯಶಸ್ವಿ | Hypersonic Vehicle Trials
ಬೆಳಗ್ಗೆದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಹಲವರಿಗಿದೆ. ಮನೆಗೆ ಅತಿಥಿಗಳು ಬಂದಾಗ ಟೀ ಬಿಸ್ಕೆಟ್ ಸತ್ಕಾರವಂತೂ ನಡೆಯಲೇಬೇಕು. ಫ್ರೆಂಡ್ಸ್, ಫ್ಯಾಮಿಲಿ ಸೇರಿದಾಗ ಜತೆ ಟೀ ಕುಡಿಯುವ ಖುಷಿಯೇ ಬೇರೆ. ಹೀಗೆ ಭಾರತದಲ್ಲಿ ಹಲವು ನೆಪಗಳನ್ನೊಡ್ಡಿ ಜನರು ಟೀ ಕುಡಿಯೋಕೆ ಹೆಚ್ಚು ಉತ್ಸಾಹ ತೋರಿಸುತ್ತಾರೆ. ಇಂದಿಗೂ ಊರಿನ ಕೇಂದ್ರಭಾಗದಲ್ಲಿ ಹೋಟೆಲುಗಳು ಕಾಫಿ, ಟೀ ನೀಡಲೆಂದು ಮುಂಜಾನೆಯೇ ತೆರೆದಿರುತ್ತವೆ. ಸಮೀಕ್ಷೆಯೊಂದರ ಪ್ರಕಾರ ಶೇ.ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ ಎಂದು ಹೇಳಲಾಗಿದೆ.
BREAKING NEWS : ಇಸ್ರೋ ನಡೆಸಿದ ಹೈಪರ್ಸಾನಿಕ್ ವಾಹನ ಪ್ರಯೋಗ ಪರೀಕ್ಷೆ ಯಶಸ್ವಿ | Hypersonic Vehicle Trials
ತಜ್ಞರು ವಿವರಿಸಿರುವ ಪ್ರಕಾರ, : ಚುಮುಚುಮು ಚಳಿಗೆ ಟೀ ಸೇವನೆ ಆರೋಗ್ಯಕ್ಕೆ ಹಾನಿಕರ. ವಿಶೇಷವಾಗಿ ಹೊಟ್ಟೆ ಮತ್ತು ಕರುಳುಗಳ ಒಳಭಾಗದ ಪದರವನ್ನು ಟೀಯಲ್ಲಿರುವ ರಾಸಾಯನಿಕಗಳು ಘಾಸಿಗೊಳಿಸುತ್ತವೆ. ಚಹಾದಲ್ಲಿರುವ ಸಕ್ಕರೆಯ ಪ್ರಮಾಣ ದೇಹದಲ್ಲಿ ಅನಗತ್ಯ ಅನಗತ್ಯ ಕ್ಯಾಲೋರಿಗಳನ್ನು ಹೆಚ್ಚಿಸುತ್ತಾ ಹೋಗುತ್ತದೆ. ಕುಡಿಯುವ ಚಹಾದ ಪ್ರಮಾಣ ಹೆಚ್ಚಾದಷ್ಟೂ ಸಕ್ಕರೆ ಮತ್ತು ಅದರ ಮೂಲಕ ಕ್ಯಾಲೋರಿಗಳು ಸಹ ಹೆಚ್ಚಾಗುತ್ತಾ ಹೋಗುತ್ತವೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ.
BREAKING NEWS : ಇಸ್ರೋ ನಡೆಸಿದ ಹೈಪರ್ಸಾನಿಕ್ ವಾಹನ ಪ್ರಯೋಗ ಪರೀಕ್ಷೆ ಯಶಸ್ವಿ | Hypersonic Vehicle Trials
ನಮ್ಮ ಜೀರ್ಣಾಂಗಗಳಲ್ಲಿ ಸದಾ ಜೀರ್ಣರಸಗಳು ಇರುತ್ತವೆ ಹಾಗೂ ಜೀರ್ಣಕ್ರಿಯೆಯಲ್ಲಿ ಬಳಕೆಯಾಗುತ್ತಿದ್ದಂತೆಯೇ ಸತತವಾಗಿ ಉತ್ಪತ್ತಿಯಾಗುತ್ತಲೂ ಇದ್ದು ಸಮತೋಲನ ಕಾಯ್ದುಕೊಳ್ಳುತ್ತವೆ. ಆದರೆ, ಟೀ ಅಥವಾ ಕಾಫಿ ಕುಡಿದರೆ ಈ ರಸಗಳ ಆಮ್ಲೀಯ-ಕ್ಷಾರೀಯ ಸಮತೋಲನ ತಪ್ಪಿ ಹೋಗುತ್ತದೆ. ಪರಿಣಾಮವಾಗಿ ಈ ರಸಗಳು ನಿರ್ವಹಿಸಬೇಕಾಗಿದ್ದ ಜೀರ್ಣಕ್ರಿಯೆ ಆಗಬೇಕಾಗಿದ್ದ ಕ್ರಮದಲ್ಲಿ ಆಗುವುದಿಲ್ಲ. ಟೀಯಲ್ಲಿರುವ ಥಿಯೋಫೈಲೀನ್ ಎಂಬ ಅಂಶ ಜೀರ್ಣಾಂಗಗಳಲ್ಲಿ ನೀರಿನ ಅಂಶ ಇಲ್ಲದಂತೆ ಮಾಡುತ್ತದೆ. ಹೀಗಾಗಿ ಇದರಿಂದ ಮಲಬದ್ಧತೆ ಉಂಟಾಗುತ್ತದೆ.
BREAKING NEWS : ಇಸ್ರೋ ನಡೆಸಿದ ಹೈಪರ್ಸಾನಿಕ್ ವಾಹನ ಪ್ರಯೋಗ ಪರೀಕ್ಷೆ ಯಶಸ್ವಿ | Hypersonic Vehicle Trials