ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಧ್ಯ ಫೋನ್ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಮೊದಲೆಲ್ಲಾ ನಾವು ಅಗತ್ಯವಿದ್ರೆ ಮಾತ್ರ ಫೋನ್ ಬಳಸುತ್ತಿದ್ದೆವು. ಆದ್ರೆ, ಈಗ ಹಾಗಿಲ್ಲ. ಮೊಬೈಲ್ ಅಗತ್ಯವಿರಲಿ ಅಥವಾ ಇಲ್ಲದಿರಲಿ ಬಳಸ್ತಾನೆ ಇರ್ತೇವೆ. ನಮ್ಮ ಕೆಲಸದ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ್ರೂ ಸಹ ನಾವು ನಮ್ಮ ಸ್ವಲ್ಪ ಸಮಯವನ್ನ ಫೋನ್’ನೊಂದಿಗೆ ಕಳೆಯುತ್ತೇವೆ.
ಇನ್ನು ಹೇಳಬೇಕು ಅಂದ್ರೆ ಬಹಳಷ್ಟು ಜನ ಎಚ್ಚರವಾಗುತ್ತಿದ್ದಂತೆ ಸೆಲ್ ಫೋನ್ ನೋಡ್ತಾರೆ. ಇನ್ನು ಇತ್ತಿಚಿಗೆ ಸಣ್ಣ ಮಕ್ಕಳು ಸಹ ಈ ಫೋನ್’ಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ತಿನ್ನಲು, ಮಲಗಲು ಅಷ್ಟೇ ಯಾಕೆ ನಿಮ್ಮ ಮಾತು ಕೇಳಲು ಕೂಡ ಫೋನ್ ತೋರಿಸುವ ಅಮಿಷ ಹೊಡ್ಡಬೇಕು. ಇನ್ನು ಕೆಲವೊಂದಿಷ್ಟು ಜ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ಫೋನ್ ಶೌಚಾಲಯಕ್ಕೆ ಒಯ್ಯುತ್ತಿದ್ದಾರೆ.
ಹೌದು, ಸಾಕಷ್ಟು ಜನ ತಮ್ಮ ಮೊಬೈಲ್ ಫೋನ್ ಶೌಚಾಲಯಕ್ಕೆ ಒಯ್ಯುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಹೆಚ್ಚು ಸಮಯವನ್ನ ಕಳೆಯಲು ಇದು ಮುಖ್ಯ ಕಾರಣವಾಗಿದೆ. ಆದ್ರೆ, ಈ ರೀತಿಯಾಗಿ ಶೌಚಾಲಯಗಳಿಗೆ ಮೊಬೈಲ್ ಒಯ್ಯುವುದು ಮತ್ತು ಅಲ್ಲಿ ಹೆಚ್ಚು ಸಮಯವನ್ನ ಕಳೆಯುವುದು ತಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಿದ್ರೆ, ಇದ್ರಿಂದೇನು ಅಪಾಯ.? ಮುಂದೆ ಓದಿ.
ಶೌಚಾಲಯಗಳು ಎಲ್ಲಾ ಸಮಯದಲ್ಲೂ ನಮ್ಮ ಆರೋಗ್ಯಕ್ಕೆ ಹಾನಿಕಾರಕವಾದ ಬ್ಯಾಕ್ಟೀರಿಯಾಗಳನ್ನ ಹೊಂದಿರುತ್ತವೆ. ಶೌಚಾಲಯವನ್ನ ಬಳಸಿದ ನಂತ್ರ ಕೈಗಳನ್ನ ತೊಳೆಯುವುದು ಬಹಳ ಮುಖ್ಯ. ನೀವು ಫೋನ್ ಅಲ್ಲಿಗೆ ತೆಗೆದುಕೊಂಡು ಹೋಗಬೇಕು ಮತ್ತು ಹೊರಗೆ ಬಂದ ನಂತರ ಅದನ್ನು ಸ್ಯಾನಿಟೈಸ್ ಮಾಡಬೇಕು. ಹಾಗೆ ಮಾಡದೆ ಬಳಸಿದ್ರೆ, ಅದು ಸೋಂಕಿಗೆ ಕಾರಣವಾಗಬಹುದು. ಇದು ಆರೋಗ್ಯಕ್ಕೆ ಮಾತ್ರವಲ್ಲದೇ ಚರ್ಮದ ಕಾಯಿಲೆಗಳಿಗೂ ಕಾರಣವಾಗುತ್ತದೆ.
ಇನ್ನು ಶೌಚಾಲಯದಲ್ಲಿ ಫೋನ್ ಬಳಸುವುದರಿಂದ ಮೂಲವ್ಯಾಧಿ ರೋಗದ ಅಪಾಯವನ್ನ ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅನೇಕ ಜನರು ಫೋನ್ ಬಳಸಿ ಶೌಚಾಲಯದಲ್ಲಿ ದೀರ್ಘಕಾಲ ಉಳಿಯುತ್ತಾರೆ. ಹಾಗೆ ಮಾಡುವುದರಿಂದ ಅವರ ಪಾದಗಳು ಮರಗಟ್ಟಲು ಪ್ರಾರಂಭಿಸುತ್ತವೆ. ತಜ್ಞರ ಪ್ರಕಾರ, ಇದು ಗುದನಾಳದ ಮೇಲೆ ಒತ್ತಡವನ್ನ ಹಾಕುತ್ತದೆ. ಈ ತಪ್ಪನ್ನ ನಿರಂತರವಾಗಿ ಪುನರಾವರ್ತಿಸುವುದು ಮೂಲವ್ಯಾಧಿ ಕಾಯಿಲೆಗೆ ಕಾರಣವಾಗಬಹುದು.
ಫೋನ್’ನೊಂದಿಗೆ ಸಮಯ ಕಳೆಯುವುದು ಅತಿಸಾರಕ್ಕೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇನ್ನೀದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಈ ರೋಗವು ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ. ಫೋನ್ ಪರದೆಯ ಮೂಲಕ ನಮ್ಮ ದೇಹವನ್ನ ಪ್ರವೇಶಿಸುವ ಕೆಟ್ಟ ಬ್ಯಾಕ್ಟೀರಿಯಾಗಳು ಇದಕ್ಕೆ ಮುಖ್ಯ ಕಾರಣ. ಅದಕ್ಕಾಗಿಯೇ ನೆನಪಿಡಿ, ವಿನೋದಕ್ಕಿಂತ ಆರೋಗ್ಯ ಜೀವನವು ಹೆಚ್ಚು ಮುಖ್ಯ.
BIG NEWS: ಡಿ.19ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಅಧಿವೇಶನ: ಹೀಗಿದೆ ಸಿಎಂ, ಸಚಿವರ ಕೊಠಡಿಗಳ ಸಂಖ್ಯೆ