ಹಾವೇರಿ: 86ನೇ ಅಖಿಲಾ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪ್ರತಿಕೆ ಇದೀಗ ಎಲ್ಲೆಡೆ ವೈರಲ್ ಆಗಿದೆ.
BIGG NEWS: ಅಂಜನಾದ್ರಿ ಬೆಟ್ಟದಲ್ಲಿ ವಿದೇಶಿಗರಿಂದ ಶ್ರೀರಾಮನ ಜಪ; 575 ಮೆಟ್ಟಿಲೇರಿ ಆಂಜನೇಯ ದರ್ಶನ
ಜನವರಿ 6, 7, 8ರಂದು ಹಾವೇರಿಯಲ್ಲಿ ನಡೆಯಲಿರುವ ಸಮ್ಮೇಳನದ ಆಮಂತ್ರಣ ಪತ್ರಿಕೆಯು ಅಧಿಕೃತ ಬಿಡುಗಡೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡದ ಅತಿ ದೊಡ್ಡ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸೋರಿಕೆ ಆಗಿದ್ದರು ಕನ್ನಡ ಸಾಹಿತ್ಯ ಪರಿಷತ್ತು ಸುಮ್ಮನೆ ಇದ್ದಾರೆ.
BIGG NEWS: ಅಂಜನಾದ್ರಿ ಬೆಟ್ಟದಲ್ಲಿ ವಿದೇಶಿಗರಿಂದ ಶ್ರೀರಾಮನ ಜಪ; 575 ಮೆಟ್ಟಿಲೇರಿ ಆಂಜನೇಯ ದರ್ಶನ
ಈಗಾಗಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಯಾಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಜನೇವರಿ 6,7 ಮತ್ತು 8ರಂದು ಮೂರು ದಿನಗಳ ಕಾಲ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಹಾವೇರಿ ನಗರದ ಅಜ್ಜಯ್ಯನ ಗದ್ದುಗೆ ಬಳಿ ಜಾಗ ಅಂತಿಮಗೊಳಿಸಲಾಗಿದೆ.
ಸಮ್ಮೇಳನಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಉಳಿದಿದೆ. ಸಮ್ಮೇಳನ ನಡೆಸುವ ಜಾಗದಲ್ಲಿ ಈಗಾಗಲೇ ಸಿದ್ಧತಾ ಕಾರ್ಯಗಳು ಶುರುವಾಗಿದೆ. ಸಮ್ಮೇಳನ ನಡೆಯುತ್ತಿರುವ ಹಾವೇರಿ ಹಲವು ಅಪರೂಪಗಳಿಗೆ ಸಾಕ್ಷಿಯಾಗಿದೆ.