ಬೆಳಗಾವಿ : ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ ತಾರಕಕ್ಕೇರಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿಯಲೆಂದು ಡಿ.19 ರಂದು ‘ಮಹಾಮೇಳಾವ್’ ಆಯೋಜನೆಗೆ ಎಂಇಸ್ (MES) ಕರೆ ನೀಡಿದೆ.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿಯೇ ಮಹಾಮೇಳವ್ ಆಯೋಜನೆಗೆ ಎಂಇಎಸ್ ಸಿದ್ದತೆ ನಡೆಸಿದ್ದು, ಮಹಾರಾಷ್ಟ್ರದ ನಾಯಕರಿಗೆ ಆಹ್ವಾನ ನೀಡಿದೆ.
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಶರದ್ ಪವಾರ್. ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್ ಪಾಟೀಲ್, ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಸೇರಿ ಹಲವರಿಗೆ ಆಹ್ವಾನ ನೀಡಿದೆ ಎನ್ನಲಾಗಿದೆ. ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸಮಾವೇಶ ನಡೆಸಲು ಎಂಇಎಸ್ ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಶಿವಸೇನೆ ಹಾಗೂ ಎಂಇಎಸ್ ನಾಯಕರನ್ನು ಬೆಳಗಾವಿಗೆ ಆಹ್ವಾನಿಸಿ ಭಾಷಣ ಮಾಡಿಸುವುದು ಹಾಗೂ ಗಡಿ ವಿವಾದವನ್ನು ಇನ್ನಷ್ಟು ಕೆಣಕಲು ಯೋಜನೆ ಮಾಡಲಾಗಿದೆ ಎನ್ನಲಾಗಿದೆ.
WATCH VIDEO: ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಜೀವ ಉಳಿಸಿಕೊಂಡ ತಾಯಿ-ಮಗ, ವಿಡಿಯೋ ನೋಡಿ
BIGG NEWS : ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ‘ಥಾವರ್ ಚಂದ್ ಗೆಹ್ಲೋಟ್’ ಆಗಮನ : ಬಿಗಿ ಪೊಲೀಸ್ ಬಂದೋಬಸ್ತ್