ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಬಳಕೆಯಿಂದ ಅಂಗೈಯಲ್ಲಿ ಹಲವು ಸೌಲಭ್ಯಗಳು ಬಂದಿವೆ. ಅನೇಕ ಕಾರ್ಯಗಳು ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತವೆ. ಆದರೆ, ಇದರೊಂದಿಗೆ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ. ಜನರು ಎಷ್ಟೇ ಕಾಳಜಿ ವಹಿಸಿದರೂ ಸ್ಕ್ಯಾಮರ್’ಗಳು ಸೆಕೆಂಡುಗಳಲ್ಲಿ ಖಾತೆಗಳನ್ನ ಖಾಲಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಮತ್ತೊಂದು ಸೈಬರ್ ಅಪರಾಧ ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ದೊಡ್ಡ ಮೊತ್ತದೊಂದಿಗೆ FASTAG ರೀಚಾರ್ಜ್ ಮಾಡಿದ್ದಾರೆ. ಆದ್ರೆ, ಅವರು ತಮ್ಮ ಖಾತೆಯಲ್ಲಿದ್ದ ಹಣವನ್ನ ಮರುಪಡೆಯಲು ಪ್ರಯತ್ನಿಸುವಾಗ ಸೈಬರ್ ಅಪರಾಧಿಗಳು 1.20 ಲಕ್ಷ ಲಪಟಾಯಿಸಿದ್ದಾರೆ.
ಹೌದು, ದಕ್ಷಿಣ ಮುಂಬೈನ ಉದ್ಯಮಿಯೊಬ್ಬರು ಫಾಸ್ಟ್ಟ್ಯಾಗ್ ಖಾತೆಗೆ 1500 ರೂಪಾಯಿ ಬದಲಿಗೆ 15 ಸಾವಿರ ರೂಪಾಯಿ ಹಾಕಿರೋದನ್ನ ಅರಿತುಕೊಂಡರು. ನಂತ್ರ ಆ ಹಣವನ್ನ ಮರಳಿ ಪಡೆಯಲು ಬಯಸಿದರು. ಇದಕ್ಕಾಗಿ ಅವರು ಅಂತರ್ಜಾಲದಲ್ಲಿ FASTAG ಗೆ ಸಂಬಂಧಿಸಿದ ಟೋಲ್ ಫ್ರೀ ಸಂಖ್ಯೆಯನ್ನ ಹುಡುಕಿದರು. ಅದ್ರಂತೆ, ಹುಡುಕಾಟದಲ್ಲಿ ಕಾಣಿಸಿಕೊಂಡ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದರು. ಆದ್ರೆ, ಪಾಪ ಅದೇ ಅವ್ರ ದೊಡ್ಡ ನಷ್ಟಕ್ಕೆ ಕಾರಣವಾಗುತ್ತೆ ಅನ್ನೋದು ಸ್ವತಃ ಅವ್ರಿಗೆ ಗೊತ್ತಿರ್ಲಿಲ್ಲ.
ಅಸಲಿಗೆ ಆನ್ಲೈನ್ನಲ್ಲಿ ಸಿಕ್ಕ ಟೋಲ್ ಫ್ರೀ ನಂಬರ್ ಕಸ್ಟಮರ್ ಕೇರ್ ನಂಬರ್ ಅಲ್ಲ. ಇದು ಸೈಬರ್ ಅಪರಾಧಿಗಳದ್ದು. ಫೋನ್ ಕೈಗೆತ್ತಿಕೊಂಡ ಅಪರಾಧಿ ತನ್ನನ್ನ ಫಾಸ್ಟ್ ಟ್ಯಾಗ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ನಂತ್ರ ಆ್ಯಪ್ ಬಳಸಿ ಹಣ ವಾಪಸ್ ಪಡೆಯುವಂತೆ ಸೂಚಿಸಿದ್ದಾನೆ. ಈ ಕ್ರಮದಲ್ಲಿ ಸಂತ್ರಸ್ತ ಉದ್ಯಮಿಯ ಫೋನ್ ಹ್ಯಾಕ್ ಮಾಡಿ, ಅವ್ರ ಖಾತೆಯಲ್ಲಿದ್ದ 1.20 ಲಕ್ಷ ರೂಪಾಯಿ ಎಗರಿಸಿದ್ದಾನೆ.
ಮೋಸ ಹೋದ ಮೇಲೆ ಮನಗಂಡ ಉದ್ಯೋಮಿ ಮುಂಬೈನ ಎಂಆರ್ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನ ದಿನಕ್ಕೆ ವಂಚಕರ ಕಾಟ ಹೆಚ್ಚಾಗುತ್ತಿದ್ದು, ನೀವು ಎಚ್ಚರವಾಗಿರಿ. ಇನ್ನು ನಿಮ್ಗೆ ಯಾವುದೇ ದೂರು ಅಥ್ವಾ ಮಾಹಿತಿಗಾಗಿ ಕಸ್ಟಮರ್ ಕೇರ್ ನಂಬರ್ ಅವಶ್ಯಕವಾಗಿದ್ರೆ, ಅವ್ರ ಅಧಿಕೃತ ವೆಬ್ಸೈಟ್ ಚೆಕ್ ಮಾಡಿ. ಅಲ್ಲಿಂದ ಮಾತ್ರ ಸಂಖ್ಯೆ ತೆಗೆದುಕೊಂಡು ಕರೆ ಮಾಡಿ. ಯಾಕಂದ್ರೆ, ನೀವು Google ನಲ್ಲಿ ಕಸ್ಟಮರ್ ಕೇರ್ ಸಂಖ್ಯೆಯನ್ನ ಹುಡುಕಿದರೆ, ಈ ರೀತಿ ಮೋಸಹೋಗುತ್ತೀರಿ.
BIGG NEWS : ‘ಟಾಟಾ ಸ್ಟೀಲ್’ಗೆ ಶಾಕ್ ಕೊಟ್ಟ ‘ಸುಪ್ರೀಂ’ ; ‘35,000 ಕೋಟಿ’ಯ ಮ್ಯಾಟರ್ ಏನು ಗೊತ್ತಾ?
Memory loss : ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ ? ಮೊಮೊರಿ ಹೆಚ್ಚಿಸಿಕೊಳ್ಳಲು ಇಲ್ಲಿವೆ 5 ಸೂಪರ್ ಫುಡ್ ಗಳು