ಬೆಂಗಳೂರು : ಜನರ ಸ್ಪಂದನೆಯೇ ಇಲ್ಲದ ಖಾಲಿ ಕುರ್ಚಿಗಳ ಸಮಾವೇಶಗಳನ್ನು ಮಾಡಿದ ಬಿಜೆಪಿ ಪಕ್ಷ ಮತ್ತೆ ಗೆಲ್ಲುತ್ತೇವೆ ಎನ್ನುವುದು ಪರಮಹಾಸ್ಯ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.
ಕುರ್ಚಿಗಳು ಮತ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಮನಗಾಣಲಿ! ಪ್ರಧಾನಿಯ ಮೆಗಾ ರೋಡ್ ಶೋ ಹಿಮಾಚಲ ಪ್ರದೇಶದಲ್ಲಿ ವಿಫಲವಾಗಿದ್ದೇಕೆ? ತವರಿಗೆ ಮಾತ್ರ ಮೋದಿಯವರ ಪ್ರಭಾವ ಸೀಮಿತವಾಗಿದೆಯಲ್ಲವೇ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.
ಇನ್ನೊಂದು ಟ್ವೀಟ್ ನಲ್ಲಿ ಬಿಜೆಪಿ ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ. ಬಿಜೆಪಿಯ ದುರಾಡಳಿತವನ್ನು ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಕಿಡಿಕಾರಿದೆ.
ಜನರ ಸ್ಪಂದನೆಯೇ ಇಲ್ಲದ ಖಾಲಿ ಕುರ್ಚಿಗಳ ಸಮಾವೇಶಗಳನ್ನು ಮಾಡಿದ @BJP4Karnataka ಪಕ್ಷ ಮತ್ತೆ ಗೆಲ್ಲುತ್ತೇವೆ ಎನ್ನುವುದು ಪರಮಹಾಸ್ಯ.
ಕುರ್ಚಿಗಳು ಮತ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಮನಗಾಣಲಿ!ಪ್ರಧಾನಿಯ ಮೆಗಾ ರೋಡ್ ಶೋ ಹಿಮಾಚಲ ಪ್ರದೇಶದಲ್ಲಿ ವಿಫಲವಾಗಿದ್ದೇಕೆ?
ತವರಿಗೆ ಮಾತ್ರ ಮೋದಿಯವರ ಪ್ರಭಾವ ಸೀಮಿತವಾಗಿದೆಯಲ್ಲವೇ?— Karnataka Congress (@INCKarnataka) December 8, 2022
'@BJP4Karnataka ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ.
ಬಿಜೆಪಿಯ ದುರಾಡಳಿತವನ್ನು
ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ.— Karnataka Congress (@INCKarnataka) December 8, 2022
BIG NEWS: ‘ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ’ ‘ಟ್ವಿಟ್ಟರ್ ಖಾತೆ’ ಹ್ಯಾಕ್ | Eshwar Khandre
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ – ಸಿಎಂ ಬೊಮ್ಮಾಯಿ