ಬೆಂಗಳೂರು : ಮನೆಯಲ್ಲಿ ಯಾವಾಗಲೂ ಮೊಬೈಲ್ ಬಳಸುತ್ತಿದ್ದ ಬಾಲಕನನ್ನು ಗದರಿದ್ದಕ್ಕೆ ಆತ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕನನ್ನು ಏಲಣೇ ತರಗತಿ ವಿದ್ಯಾರ್ಥಿ ಯಶಸ್ ಗೌಡ (13) ಎಣದು ಗುರುತಿಸಲಾಗಿದೆ. ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆಯ ನಿವಾಸಿಯಾದ ಈತ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಿನಾಲೂ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ಯಶಸ್ ಗೌಡ ಬಂದ ಕೂಡಲೇ ಮೊಬೈಲ್ ಹಿಡಿದುಕೂರುತ್ತಿದ್ದನು. ಮೊಬೈಲ್ ಗೀಳಿನಿಂದ ಈತನಿಗೆ ಓದುವಿನಲ್ಲಿ ಆಸಕ್ತಿ ಕಡಿಮೆ ಇತ್ತಂತೆ, ಇದನ್ನು ಗಮನಿಸಿದ ಪೋಷಕರು ಈತನಿಗೆ ಬುದ್ದಿಮಾತು ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಯಶಸ್ ಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
‘ಹುಡ್ಗೀರ ಶೋಕಿಗಾಗಿ 34 ಬೈಕ್ ಕಳುವು’ : ಆರೋಪಿ ವಿಚಾರಣೆ ವೇಳೆ ಬೆಚ್ಚಿಬಿದ್ದ ಪೊಲೀಸ್ರು