ಮಂಡ್ಯ : ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಡ್ಯದಲ್ಲಿ ಅಂತರರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಜೂಜು ಹಾಗೂ ಹುಡುಗಿಯರ ಶೋಕಿ ಚಟ ಬೆಳೆಸಿಕೊಂಡಿದ್ದ ಕಳ್ಳ ಕೊನೆಗೂ ಅಂದರ್ ಆಗಿದ್ದಾನೆ.ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಚಲಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ನಂತರ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಒಂದಲ್ಲ, ಎರಡಲ್ಲ ಬರೋಬ್ಬರಿ 34 ಬೈಕ್ ಗಳನ್ನು ಕದ್ದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ, ಆದರೆ ಈತ ಇದುವರೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳದೇ ಇರುವುದು ಅಚ್ಚರಿಯಾಗಿದೆ.
ಕದ್ದ ಬೈಕ್ ಗಳನ್ನು ಅಮಾಯಕ ಜನರಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದನು ಈತನಿಂದ 34 ಬೈಕ್ ಗಳನ್ನು ಮದ್ದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ ಗಡಿ ವಿವಾದ : ಕರ್ನಾಟಕದಲ್ಲೂ ‘ಸಂಪೂರ್ಣ ಬಂದೋಬಸ್ತ್’ ಎಂದ ಸಿಎಂ ಬೊಮ್ಮಾಯಿ