ಕೆಎನ್ಎನ್ಡಿಜಿಟಲ್ ಡೆಸ್ಕ್ : ಮನೆಯಲ್ಲಿ ವಾಸಿಸುವ ಜನರ ಆರೋಗ್ಯ, ಆರ್ಥಿಕ ಮತ್ತು ಮಾನಸಿಕ ನೆಮ್ಮದಿಯ ಮೇಲೆ ವಾಸ್ತು ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ . ಮನೆ ನಿರ್ಮಾಣ ಮಾತ್ರವಲ್ಲದೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯಿಂದಲೂ ಸಮಸ್ಯೆಗಳು ಉಂಟಾಗುತ್ತವೆ. ವಿಶೇಷವಾಗಿ ಕುಟುಂಬದಲ್ಲಿ ಸಮಸ್ಯೆ. ಕೈತುಂಬ ಹಣವಿದ್ದರೂ ಒಂದಿಷ್ಟು ಗೊಂದಲ ಇದ್ದೇ ಇರುತ್ತದೆ. ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲದಿರುವುದಕ್ಕೆ ನೆಗೆಟಿವ್ ಎನರ್ಜಿಯೇ ಮುಖ್ಯ ಕಾರಣ ಎನ್ನುತ್ತಾರೆ ವೈಜ್ಞಾನಿಕ ತಜ್ಞರು. ಆದ್ರೆ, ಕೆಲವೊಂದು ಸಿಂಪಲ್ ಟಿಪ್ಸ್ ಅನುಸರಿಸಿ ಈ ನೆಗೆಟಿವ್ ಎನರ್ಜಿಗೆ ಗೇಟ್ ಪಾಸ್ ನೀಡಬೋದು. ಮಾಡಿಕೊಳ್ಳಬಹುದು ಎನ್ನಲಾಗಿದೆ. ಹಾಗಾದ್ರೆ, ಮನೆಯಿಂದಲೇ ನಕಾರಾತ್ಮಕ ಶಕ್ತಿಯನ್ನ ಹೋಗಲಾಡಿಸುವುದು ಹೇಗೆ.?
ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಜಗಳವಾಗಲು ನಕಾರಾತ್ಮಕ ಶಕ್ತಿಯೇ ಪ್ರಮುಖ ಕಾರಣ. ಮೇಲಾಗಿ ಇದು ಮಾನಸಿಕ ಸಮಸ್ಯೆಗಳಿಗೂ ಕಾರಣ ಎನ್ನುತ್ತಾರೆ ತಜ್ಞರು. ಮನೆಯಲ್ಲಿ ಸದಾ ಸುಖಮಯವಾಗಿರಲು ಹಾಗೂ ಕುಟುಂಬ ಸದಸ್ಯರ ನಡುವಿನ ಜಗಳ ತಡೆಯಲು ಕೆಲವೊಂದು ಸಲಹೆಗಳನ್ನ ಪಾಲಿಸಬೇಕು ಎಂದು ಹೇಳಲಾಗುತ್ತದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಉಪ್ಪನ್ನು ಬಳಸುತ್ತಾರೆ ಎಂದು ಹೇಳಲಾಗುತ್ತದೆ.
ಮನೆಯ ಮೂಲೆಯಲ್ಲಿ ಉಪ್ಪನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಧನಾತ್ಮಕ ಶಕ್ತಿ ಬಂದು ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ. ಉಪ್ಪನ್ನ ನಿಯಮಿತವಾಗಿ ಬದಲಾಯಿಸಬೇಕು. ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಇವುಗಳೊಂದಿಗೆ, ಹರಳೆಣ್ಣೆಯು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಕುಟುಂಬದ ಸದಸ್ಯರ ನಡುವೆ ಉತ್ತಮ ಸಂಬಂಧಗಳು ಹೆಚ್ಚುತ್ತವೆ ಮತ್ತು ಮಾನಸಿಕವಾಗಿಯೂ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ದಲಿತರಿಗೆ ಕೇಂದ್ರದಿಂದ ಬಿಗ್ ಶಾಕ್ ; ‘SC’ ವರ್ಗದವ್ರು ಆ ಎರಡು ಧರ್ಮಕ್ಕೆ ಮತಾಂತರವಾದ್ರೆ, ಎಲ್ಲಾ ಸೌಲಭ್ಯಗಳು ರದ್ದು
BIGG NEW : ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ: ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ