ನವದೆಹಲಿ : ನಮ್ಮ ದೇಶದಲ್ಲಿ ಎಸ್ಸಿ (ಪರಿಶಿಷ್ಟ ಜಾತಿ) ಇರುವ ಕೆಲವು ದಲಿತರು ತಮ್ಮ ಧರ್ಮವನ್ನ ಬದಲಾಯಿಸುತ್ತಿದ್ದು, ಅದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಅದ್ರಂತೆ, ಆ ರೀತಿ ಮತಾಂತರಗೊಂಡವರಿಗೆ ಎಸ್ ಸಿ ಸ್ಥಾನಮಾನದಡಿ ನೀಡಲಾಗುತ್ತಿದ್ದ ಸವಲತ್ತುಗಳನ್ನ ರದ್ದುಪಡಿಸಲು ನಿರ್ಧರಿಸಿದೆ. ಅದ್ರಂತೆ ದಲಿತರು, ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಅವರಿಗೆ ಇನ್ಮುಂದೆ ಎಸ್ಸಿ ಸ್ಥಾನಮಾನದ ಲಾಭ ಸಿಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಇದಕ್ಕಾಗಿ ಸಂವಿಧಾನದಲ್ಲಿ ವಿಶೇಷ ಆದೇಶವಿದೆ ಎಂದು ವಿವರಿಸಿದರು.
ಸಂವಿಧಾನದ 1950ರ ಎಸ್ಸಿ ಆದೇಶವು ಯಾವುದೇ ಅಸಂವಿಧಾನಿಕ ಅಂಶವನ್ನ ಎತ್ತಿಹಿಡಿಯುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಅಸ್ಪೃಶ್ಯತೆ ಸೇರಿ ಇತರ ಕೆಲವು ಕಾರಣಗಳಿಗಾಗಿ SC ಗಳು ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಇತ್ಯಾದಿಗಳಿಗೆ ಮತಾಂತರಗೊಳ್ಳಲು ಆದೇಶವು ಯಾವುದೇ ವಿನಾಯಿತಿಯನ್ನು ನೀಡುವುದಿಲ್ಲ ಎಂದು ವಿವರಿಸುತ್ತದೆ. ಕಾಲಾಂತರದಲ್ಲಿ ಸಂವಿಧಾನದಲ್ಲಿ ಈ ಆದೇಶಕ್ಕೆ ತಿದ್ದುಪಡಿಗಳನ್ನ ಮಾಡಲಾಗುತ್ತಿದೆ. ಇದರ ಪ್ರಕಾರ, ಹಿಂದೂ ಧರ್ಮ, ಸಿಖ್ ಧರ್ಮ, ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನ ತಮ್ಮ ಧರ್ಮವೆಂದು ಘೋಷಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿ (SC) ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ.
ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ಪ್ರಸ್ತಾವನೆಯನ್ನು ಅಂಗೀಕರಿಸಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ಆಯೋಗವು ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರನ್ನು ಸಹ ಎಸ್ಸಿ ಪಟ್ಟಿಗೆ ಸೇರಿಸಬೇಕೆಂದು ಪ್ರಸ್ತಾಪಿಸಿದೆ. ಇದು ದೋಷಪೂರಿತ ಪ್ರಸ್ತಾವನೆ ಎಂದು ಕೇಂದ್ರ ಹೇಳಿದೆ.
1950ರ ಪರಿಶಿಷ್ಟ ಜಾತಿಗಳ ಆದೇಶವು ಸಮಾನತೆಯ ಹಕ್ಕನ್ನು ಹೇಳುವ ಸಂವಿಧಾನದ 14 ನೇ ವಿಧಿಗೆ ಮತ್ತು ಧಾರ್ಮಿಕ ತಾರತಮ್ಯವನ್ನು ನಿಷೇಧಿಸುವ 15 ನೇ ವಿಧಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರವು ತಾಜಾ ಸ್ಪಷ್ಟೀಕರಣವನ್ನು ನೀಡಿದೆ. ನ್ಯಾಯಮೂರ್ತಿ ಎಸ್ಕೆ ಕೌಲ್ ನೇತೃತ್ವದ ಪೀಠದ ಮುಂದೆ ಕೇಂದ್ರವು ಬುಧವಾರ ಈ ಸ್ಪಷ್ಟನೆ ನೀಡಿದೆ.
ಕಾರಣಾಂತರಗಳಿಂದ ಧರ್ಮ ಬದಲಿಸಿದವರಿಗೆ ಎಸ್ ಸಿ ಸ್ಥಾನಮಾನ ನೀಡುವ ವಿಚಾರವಾಗಿ ವರದಿ ನೀಡಲು ಕೇಂದ್ರ ಇತ್ತೀಚೆಗೆ ಸಮಿತಿಯೊಂದನ್ನ ರಚಿಸಿದೆ. ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ. ಜಿ ಬಾಲಕೃಷ್ಣನ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯು ಇನ್ನೆರಡು ವರ್ಷಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಕೇಂದ್ರವು ಸುಪ್ರೀಂಕೋರ್ಟ್ಗೆ ತಿಳಿಸಿದೆ.