ಕಲಬುರಗಿ: ಗುಜರಾತ್ ವಿಧಾನಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಗುಜರಾತ್ ನಲ್ಲಿ 154 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಗುಜರಾತ್ ನಲ್ಲಿ ನಮ್ಮ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿವೆ. ಈ ಕುರಿತು ಪರಾಮರ್ಶೆ ಮಾಡಲಾಗುವುದು ಎಂದಿದ್ದಾರೆ
ಸುದ್ದಿಗರರೊಂದಿಗೆ ಮಾತನಾಡಿದ ಅವರು, ನಮಗೆ ಗುಜರಾತ್ನಲ್ಲಿ 80 ರಿಂದ 95 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಂತೆ ಗೆಲ್ಲಲು ಆಗಲಿಲ್ಲ. ಅಲ್ಲಿ ಮೂರು ‘ತ್ರಿ’ ಗಳು ಚೆನ್ನಾಗಿ ಕೆಲಸ ಮಾಡಿವೆ. ಅವುಗಳಿಂದಲೇ ಬಿಜೆಪಿ ಗೆಲುವು ಸಾಧಿಸಿದೆ.
ಆ ಮೂರು ತ್ರಿ ಗಳೆಂದರೆ, ಮೋದಿ, ಮನಿ ಹಾಗೂ ಮಸಲ್ ಪವರ್ ಗಳು ಎಂದರು. ಗುಜರಾತ್ನಲ್ಲಿ ನಮ್ಮ ಹಲವು ಮುಖಂಡರ ಮೇಲೆ ಹಲ್ಲೆ ಸಹ ನಡೆಸಲಾಗಿದೆ ಎಂದು ಆರೋಪಿಸಿದ ಖರ್ಗೆ, ಬಿಜೆಪಿ ಸಿಬಿಐ, ಐಟಿ ಹಾಗೂ ಇಡಿಗಳ ಬೆಂಬಲ ಪಡೆದುಕೊಂಡಿದೆ. ಗುಜರಾತ್ ನಲ್ಲಿ ಮೋದಿ ಪ್ರಭಾವವಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಪ್ರಿಯಾಂಕ್, ಮೋದಿ ಈ ಸಲದ ಚುನಾವಣೆ ಪ್ರಚಾರವನ್ನು ಕಾರ್ಪೋರೇಷನ್ ಚುನಾವಣೆಗಳ ರೀತಿ ನಡೆಸಿದ್ದಾರೆ ಎಂದರು. ಪಕ್ಷದ ಸೋಲಿನ ಕುರಿತಂತೆ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸಿ ಸರಿಪಡಿಸಿಕೊಳ್ಳಲಾಗುವುದು ಎಂದರು