ಬೆಂಗಳೂರು : ನಮ್ಮ ತಂಟೆಗೆ ಬಂದರೆ ಹುಷಾರ್..ಕರ್ನಾಟಕದ ಗಡಿ ದಾಟಿ ಒಂದೂ ಮಹಾರಾಷ್ಟ್ರ ವಾಹನವನ್ನು ಬರಲು ಬಿಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕರವೇ ಪ್ರತಿಭಟನೆ ನಡೆಸಿದ್ದು, ಮಹಾ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಹಾಗೂ ಎಂಇಎಸ್ ಪುಂಡದ ವಿರುದ್ಧ ಆಕ್ರೋಶ ಹೊರ ಹಾಕಿದ ಕರವೇ ನಾರಾಯಣ ಗೌಡ ‘ ಬೆಳಗಾವಿ ರಾಜಕಾರಣಿಗಳು ರಣಹೇಡಿಗಳಾಗಿದ್ದಾರೆ, ಮರಾಠಿ ಜನರ ಮತ ಪಡೆಯಲು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಕಿಡಿಕಾರಿದರು.
ಮತ ಕೇಳುವ ನೈತಿಕತೆ ಇದ್ದರೆ ಕನ್ನಡಿಗರ ಪರ ರಾಜಕಾರಣಿಗಳು ದನಿ ಎತ್ತಬೇಕು, ಇನ್ನೆರಡು ದಿನ ಗಡುವು ನೀಡುತ್ತೇವೆ, ಅಷ್ಟರಲ್ಲಿ ಸರಿಯಾಗದಿದ್ದರೆ ಸಂಸದೀರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ, ಪೊಲೀಸರು ನಮ್ಮ ಪ್ರತಿಭಟನೆಯನ್ನು ಪ್ರಶ್ನಿಸಬಾರದು ಎಂದರು. ಇನ್ನೂ ಮಹಾ ಪುಂಡರು ನಮ್ಮ ತಂಟೆಗೆ ಬಂದರೆ ಹುಷಾರ್..ಕರ್ನಾಟಕದ ಗಡಿ ದಾಟಿ ಒಂದೂ ಮಹಾರಾಷ್ಟ್ರ ವಾಹನವನ್ನು ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗದಗದಲ್ಲಿ ಕರವೇ ಪ್ರತಿಭಟನೆ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚು ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರು ನಿನ್ನೆ ಕರ್ನಾಟಕದ ವಾಹನಗಳಿಗೆ ಮತ್ತೆ ಮಸಿ ಬಳಿದು ಸಿಎಂ ಬೊಮ್ಮಾಯಿ ಭಾವಚಿತ್ರಕ್ಕೆ ಕೂಡ ಮಸಿ ಹಚ್ಚಿ ಪುಂಡಾಟ ಮೆರೆದಿದ್ದರು.
ಮರಾಠಿ ಪುಂಡರ ಕೃತ್ಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗದಗದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಗದಗದ ಗಾಂಧಿ ಸರ್ಕಲ್ ನಲ್ಲಿ ಇಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ವಾಹನಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾ ಪುಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BREAKING NEWS : ‘MES’ ಪುಂಡಾಟಿಕೆ ವಿರುದ್ಧ ‘ಕರವೇ’ ಆಕ್ರೋಶ : ಗದಗದಲ್ಲಿ ಮಹಾರಾಷ್ಟ್ರದ ವಾಹನಗಳಿಗೆ ಮಸಿ
BIGG NEWS : ವರುಣಾ ಕ್ಷೇತ್ರದಲ್ಲಿ ‘ಸಿದ್ದರಾಮಯ್ಯ’ 2 ದಿನ ಪ್ರವಾಸ : ನಂಜನಗೂಡಿನಲ್ಲಿ ಮಾಜಿ ಸಿಎಂಗೆ ಅದ್ದೂರಿ ಸ್ವಾಗತ