ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚು ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರು ನಿನ್ನೆ ಕರ್ನಾಟಕದ ವಾಹನಗಳಿಗೆ ಮತ್ತೆ ಮಸಿ ಬಳಿದು ಸಿಎಂ ಬೊಮ್ಮಾಯಿ ಭಾವಚಿತ್ರಕ್ಕೆ ಕೂಡ ಮಸಿ ಹಚ್ಚಿ ಪುಂಡಾಟ ಮೆರೆದಿದ್ದರು.
ಮರಾಠಿ ಪುಂಡರ ಕೃತ್ಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗದಗದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಗದಗದ ಗಾಂಧಿ ಸರ್ಕಲ್ ನಲ್ಲಿ ಇಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ವಾಹನಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾ ಪುಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರಕ್ಕೆ ಮಸಿ ಬಳಿಯುವ ಮೂಲಕ ಮತ್ತೆ ಮಹಾ ಕಿಡಿಗೇಡಿಗಳು ಪುಂಟಾಟ ಮೆರೆದಿದ್ದರು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸಿಎಂ ಭಾವಚಿತ್ರಕ್ಕೆ ಮಸಿ ಬಳಿದಿದ್ದರು,
ಮಹಾರಾಷ್ಟ್ರದ ಭಾರಮತಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಸ್ ಗೆ ಮಸಿ ಬಳಿದಿದ್ದಾರೆ.ಹಳಿಯಾಳ ಬಸ್ ಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ. ಭಾರಮತಿ-ಹಳಿಯಾಳ ಮಧ್ಯೆ ಸಂಚರಿಸುವ ಬಸ್ ಹಿಂಬದಿ, ಪಕ್ಕ ಹಾಗೂ ಮುಂಬದಿಗೆ ಶಿವಸೇನೆ ಪುಂಡರು ಮಸಿಯನ್ನು ಹಾಕಿ ಕಿಡಿಗೇಡಿತನವನ್ನು ಮರೆದಿದ್ದಾರೆ.ಭಾರಾಮತಿಯಿಂದ ಬೆಳಗಾವಿ ಬಸ್ ನಿಲ್ದಾಣಕ್ಕೆ ಹಳಿಯಾಳ ಬಸ್ ಬಂದಿದ್ದು, ಶಿವಸೇನೆ ಪುಂಡರ ಪುಂಡಾಣಿಕೆ ಬಗ್ಗೆ ಬಸ್ ನಿರ್ವಾಹ ಭರಮಪ್ಪ ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿ ಭಾರಾಮತಿ ನಿಲ್ದಾಣದಲ್ಲಿ ಬಸ್ ಅನ್ನು ನಿಲ್ಲಿಸಿದ್ದೆವು. ಈ ವೇಳೆ ಸುಮಾರು 20 ಜನ ಶಿವಸೇನೆ ಕಾರ್ಯಕರ್ತರು ಬಂದು ಕಪ್ಪು ಮಸಿ ಬಳಿದಿದ್ದಾರೆ.
ಶಿವಮೊಗ್ಗ: ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut