ಮಂಡ್ಯ : ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್ ಬೆನ್ನಲ್ಲೆ ಮಂಡ್ಯ ಜಿಲ್ಲೆಯಲ್ಲೊಂದು ಹೊಸ ಅವಾಂತರ ಸೃಷ್ಟಿಯಾಗಿದೆ. ನನ್ನ ಮೈಮೇಲೆ ಕಾಂತಾರ ದೈವ ಬಂದಿದೆ ಎಂದು ನಂಬಿಸುವ ಮೂಲಕ ಮಹಿಳೆಯೊಬ್ಬಳು ಜನರಿಗೆ ನಂಬಿಸಿ ವಂಚಿಸುವ ಹಾದಿ ಹಿಡಿದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ
BIGG NEWS : ಕರಾವಳಿಯಲ್ಲಿ ಹಾಡಹಗಲೇ ಗಾಂಜಾ ಮತ್ತಲ್ಲಿ, ಯುವಕನಿಗೆ ತಲವಾರು ತೋರಿಸಿ ಬೆದರಿಕೆ, ಯುವಕ ಅರೆಸ್ಟ್
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಳವಳ್ಳಿ ಟೌನ್ ನ ಪೇಟೆ ಬೀದಿಯಲ್ಲಿ ಶಿವಲಿಂಗಮ್ಮ ಎಂಬಾಕೆ ವಂಚಿಸುತ್ತಿರುವ ಮಹಿಳೆ ಎಂದು ಗುರುತಿಸಲಾಗಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಎನ್ಸಿಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಕ್ಲೈಮ್ಲಾಕ್ಸ್ ನಲ್ಲಿ ತೋರಿಸಿದ್ದಂತೆ ನಟನೆ ಮಾಡುವ ಮೂಲಕ ಅಮಾಯಕ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ಜನರ ಅಭಿಪ್ರಾಯ ಪಟ್ಟಿದ್ದಾರೆ.
BIGG NEWS : ಕರಾವಳಿಯಲ್ಲಿ ಹಾಡಹಗಲೇ ಗಾಂಜಾ ಮತ್ತಲ್ಲಿ, ಯುವಕನಿಗೆ ತಲವಾರು ತೋರಿಸಿ ಬೆದರಿಕೆ, ಯುವಕ ಅರೆಸ್ಟ್