ನವದೆಹಲಿ: ಮುಂಬರುವ ತಿಂಗಳುಗಳಲ್ಲಿ, ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ ಸುಮಾರು 20,000 ಉದ್ಯೋಗಿಗಳನ್ನು ಅಮೆಜಾನ್(Amazon) ವಜಾಗೊಳಿಸಬಹುದು ಎಂದು ಕಂಪ್ಯೂಟರ್ ವರ್ಲ್ಡ್ ವರದಿ ಮಾಡಿದೆ.
ಜಾಗತಿಕವಾಗಿ 1.6 ಮಿಲಿಯನ್ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಟೆಕ್ ದೈತ್ಯ, ವಿವಿಧ ಇಲಾಖೆಗಳ ಸಿಬ್ಬಂದಿಗೆ ಗೇಟ ಪಾಸ್ ನೀಡಲಿದೆ. ಇವುಗಳಲ್ಲಿ ವಿತರಣಾ ಕೆಲಸಗಾರರು, ಕಾರ್ಪೊರೇಟ್ ಅಧಿಕಾರಿಗಳು ಮತ್ತು ತಂತ್ರಜ್ಞಾನ ಸಿಬ್ಬಂದಿ ಸೇರಿದ್ದಾರೆ.
ವಜಾಗೊಳಿಸುವಿಕೆಯು ಕಂಪನಿಯ ಎಲ್ಲಾ ಹಂತಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯು ತಿಳಿಸಿದೆ. ಕಳೆದ ತಿಂಗಳು, ನ್ಯೂಯಾರ್ಕ್ ಟೈಮ್ಸ್ ಅಮೆಜಾನ್ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ವರದಿ ಮಾಡಿದೆ. ಇದು ತಂತ್ರಜ್ಞಾನ ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗಿಗಳ ಕಡಿತವಾಗಿದೆ. ಆದರೆ, ಈಗ ವಜಾಗೊಂಡ ನೌಕರರ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ವರದಿ ಹೇಳಿದೆ.
ಕಳೆದ ಕೆಲವು ದಿನಗಳಲ್ಲಿ ಅಮೆಜಾನ್ ತನ್ನ ಮ್ಯಾನೇಜರ್ಗಳಿಗೆ ಉದ್ಯೋಗಿಗಳಲ್ಲಿ ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಬೇಕು ಎಂದು ಹೇಳಿದೆ.
ಮೂಲಗಳ ಪ್ರಕಾರ, ವಜಾಗೊಳ್ಳುವ ಕಾರ್ಪೊರೇಟ್ ಉದ್ಯೋಗಿಗಳು ಕಂಪನಿಯ ಒಪ್ಪಂದಗಳ ಪ್ರಕಾರ 24 ಗಂಟೆಗಳ ನೋಟಿಸ್ ಮತ್ತು ಬೇರ್ಪಡಿಕೆ ವೇತನವನ್ನು ಸ್ವೀಕರಿಸುತ್ತಾರೆ ಎನ್ನಲಾಗಿದೆ.
ಅಮೆಜಾನ್ ವಜಾಗೊಳಿಸಲು ನಿರ್ದಿಷ್ಟ ಇಲಾಖೆ ಅಥವಾ ಸ್ಥಳವನ್ನು ಗುರಿಯಾಗಿಸಿಕೊಂಡಿದೆ ಮತ್ತು ಈ ಕ್ರಮವು ವ್ಯವಹಾರದಾದ್ಯಂತ ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಮೂಲವು ಸೇರಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಅಮೆಜಾನ್ ಅತಿ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಆದ್ರೆ, ಇದೀಗ ವಜಾಗೊಳಿಸುವಿಕೆಯು ಅಷ್ಟೇ ಪ್ರಮಾನದಲ್ಲಿ ಹೆಚ್ಚಾಗಲಿದೆ ಎನ್ನಲಾಗಿದೆ.
ಭಾರತೀಯ ರೈಲ್ವೆ ಖಾಸಗೀಕರಣದ ಬಗ್ಗೆ ಸಂಸತ್ತಿನಲ್ಲಿ ಮಹತ್ವದ ಮಾಹಿತಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್