ಬೆಂಗಳೂರು : ಜನವರಿ 8 ರಂದು ದಲಿತ ಐಕ್ಯತಾ ಸಮಾವೇಶವನ್ನು ಆಯೋಜನೆ ಮಾಡಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
BIGG NEWS: ಅಕ್ರಮ ಸಂಬಂಧ ಹಿನ್ನೆಲೆ; ಗಂಡನನ್ನೇ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದ ಮೂವರ ಅರೆಸ್ಟ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಜನವರಿ 8 ರಂದು ದಲಿತ ಐಕ್ಯತಾ ಸಮಾವೇಶವನ್ನು ಆಯೋಜನೆ ಮಾಡಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಮೀಸಲಾತಿ ನಮಗೆ ಭಿಕ್ಷೆ ಅಲ್ಲ. ಅದು ನಮ್ಮ ಹಕ್ಕು, ಮೀಸಲಾತಿ ಇರಬೇಕು ಮತ್ತು ಬೇಡ ಅಂತ ಚರ್ಚಿಸುವವರು ಇದ್ದಾರೆ. ಡಾ.ಅಂಬೇಡ್ಕರ್ 10 ವರ್ಷದವರೆಗೆ ಮೀಸಲಾತಿ ನೀಡಿದ್ದರು. ಎಲ್ಲ ಸರ್ಕಾರಗಳೂ ಮೀಸಲಾತಿ ಮುಂದುವರೆಸಿಕೊಂಡು ಬಂದಿವೆ. ಅಸ್ಪೃಶ್ಯತೆ ಜೀವಂತವಾಗಿ ಇರುವವರೆಗೂ ಮೀಸಲಾತಿ ಇರಲೇಬೇಕು ಎಂದು ಹೇಳಿದ್ದಾರೆ.