ಚಿತ್ರದುರ್ಗ: ಜನಾರ್ದನ ರೆಡ್ಡಿ ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ, ನನಗೆ ಆತನ ಸ್ನೇಹ ಬಹಳ ದೊಡ್ಡದು ಎಂದು ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಸಚಿವ ಶ್ರೀರಾಮುಲು ರಾಜಕಾರಣ ಹೊರೆತುಪಡಿಸಿ ನನ್ನ ಸ್ನೇಹ ಹೆಚ್ಚಾಗಿದೆ ಎಂದರು. ಜನಾರ್ದನ್ ರೆಡ್ಡಿ ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ, ನನಗೆ ಆತನ ಸ್ನೇಹ ಬಹಳ ದೊಡ್ಡದು ಎಂದು ಸಚಿವ ಶ್ರೀರಾಮುಲು ಹೇಳಿದರು.ಸ್ನೇಹ ಮತ್ತು ಪಾರ್ಟಿಯನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು. .
ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷ ಹಾಗೂ ಯಾರಿಗೂ ಮುಜುಗರವಾಗದಂತೆ ನೋಡಿಕೊಳ್ಳುತ್ತೇನೆ. ರಾಜಕಾರಣ ಹೊರೆತುಪಡಿಸಿ ನನ್ನ ಸ್ನೇಹ ಹೆಚ್ಚಾಗಿದೆ ಎಂದರು.
ನಮ್ಮಿಬ್ಬರದ್ದೂ ರಾಜಕೀಯ ಮೀರಿದ ಸಹೋದರತ್ವ : ಜನಾರ್ಧನ ರೆಡ್ಡಿ
ನನ್ನ ಹಾಗೂ ಶ್ರೀರಾಮುಲು ಮಧ್ಯೆ ಭಿನ್ನಾಭಿಪ್ರಾಯವೇ ಇಲ್ಲ. ಇಡೀ ಜಗತ್ತೇ ಬೇರೆ, ನಾನು ಶ್ರೀರಾಮುಲುನೇ ಬೇರೆ. ನಮ್ಮಿಬ್ಬರದ್ದೂ ರಾಜಕೀಯ ಮೀರಿದ ಸಹೋದರತ್ವವಾಗಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂಬುದಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ( Former Minister Janardhana Reddy ) ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಸಚಿವ ಶ್ರೀರಾಮುಲು ( Minister B Sriramulu ) ನಿವಾಸಕ್ಕೆ ಭೇಟಿ ನೀಡಿದ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಂದಿಲ್ಲ. ಆ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ ಎಂದರು.
ಇಡೀ ಜಗತ್ತೇ ಬೇರೆ, ನಾನು ಶ್ರೀರಾಮುಲುನೇ ಬೇರೆಯ. ಸಚಿವ ಶ್ರೀರಾಮುಲು ಮನೆ ಅಂದ್ರೇ ಅದು ನನ್ನ ಮನೆ ಇದ್ದಂತೆ. ನನ್ನ ಮನೆ ಅಂದ್ರೇ ಅದು ಶ್ರೀರಾಮುಲು ಮನೆ ಇದ್ದಂತೆ ಎಂದು ಹೇಳಿದರು. ನಮ್ಮಿಬ್ಬರದ್ದೂ ರಾಜಕೀಯ ಮೀರಿದ ಸಂಬಂಧವಾಗಿದೆ. ರಾಜಕೀಯ ಮೀರಿದಂತ ಸಹೋದರತ್ವವಾಗಿದೆ. ಇದನ್ನು ಶ್ರೀರಾಮುಲು ಅವರೇ ಹೇಳಿದ್ದಾರೆ. ಹೀಗಾಗಿ ಮುನಿಸು ಇಲ್ಲ. ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
BREAKING NEWS : ಬೆಂಗಳೂರಿನಲ್ಲಿ ಕಲ್ಲು ಎತ್ತಿಹಾಕಿ ಭಯಾನಕ ಮರ್ಡರ್ ಪ್ರಕರಣ : 6 ಮಂದಿ ಆರೋಪಿಗಳು ಅಂದರ್
OMG : ಆನೆಗೆ ತಿನ್ನಲು ಕಬ್ಬು ಕೊಟ್ಟ ಲಾರಿ ಚಾಲಕನಿಗೆ ಬಿತ್ತು 75 ಸಾವಿರ ದಂಡ..!