ಚಿಕ್ಕಮಗಳೂರು: : ಕರ್ನಾಟಕದ ಅಯೋಧ್ಯೆ ಎಂದೇ ಪ್ರಸಿದ್ಧ ಪಡೆದ ಚಿಕ್ಕಮಗಳೂರಿನ ದತ್ತಪೀಠದಲ್ಲಿ 3 ದಿನಗಳ ಕಾಲ ದತ್ತಜಯಂತಿ ಸಂಭ್ರಮ ಆರಂಭವಾಗಿದ್ದು, ಜಿಲ್ಲೆಯಾದ್ಯಂತ 4,500ಕ್ಕೂ ಅಧಿಕ ಪೊಲೀಸರಿಂದ ಹದ್ದಿನ ಕಣ್ಣು ಇಡಲಾಗಿದೆ
‘ಪ್ರೀ ಮೆಟ್ರಿಕ್’ ವಿದ್ಯಾರ್ಥಿಗಳಿಗೆ ‘ಸ್ಕಾಲರ್ ಶಿಪ್’ ನೀಡುವಂತೆ ಸಿದ್ದರಾಮಯ್ಯ ಆಗ್ರಹ
ಕಾಫಿನಾಡಿನಲ್ಲಿ ಇಂದು ಅನಸೂಯ ಜಯಂತಿ, ನಾಳೆ, ಶೋಭಾಯಾತ್ರೆ ನಡೆಯಲಿದ್ದು, ನಾಡಿದ್ದು ದತ್ತಪಾದುಕೆ ದರ್ಶನ ನಡೆಯಲಿದೆ. ಹಾಗಾಗಿ, ಹಿಂದೂ ಸಂಘಟನೆಗಳು ನಗರವನ್ನ ಕೇಸರಿಮಯವನ್ನಾಗಿಸಿದ್ರೆ, 4,500ಕ್ಕೂ ಅಧಿಕ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ
‘ಪ್ರೀ ಮೆಟ್ರಿಕ್’ ವಿದ್ಯಾರ್ಥಿಗಳಿಗೆ ‘ಸ್ಕಾಲರ್ ಶಿಪ್’ ನೀಡುವಂತೆ ಸಿದ್ದರಾಮಯ್ಯ ಆಗ್ರಹ
ಜಿಲ್ಲಾದ್ಯಂತ ಖಾಕಿ ಪಡೆ 4, 500 ಪೊಲೀಸರೊಂದಿಗೆ ಹೈ ಅಲರ್ಟ್ ಘೋಷಿಸಿದ್ದು, ಓರ್ವ ಎಸ್ಪಿ, ನಾಲ್ವರು ಎ.ಎಸ್.ಪಿ. 17 ಡಿವೈಎಸ್ಪಿ, 39 ಇನ್ಸ್ಪೆಕ್ಟರ್, 156 ಸಬ್ ಇನ್ಸ್ಪೆಕ್ಟರ್, 285 ಎಎಸ್ಐ, 2050 ಕಾನ್ಸ್ಟೇಬಲ್, 200 ಲೇಡಿ ಪೋಲೀಸ್, 500 ಹೋಂ ಗಾರ್ಡ್, 15 ಕೆ.ಎಸ್.ಆರ್.ಪಿ, 25 ಡಿ.ಆರ್ ಸೇರಿ ಒಟ್ಟು 4500 ಪೊಲೀಸರು, 150ಕ್ಕೂ ಹೆಚ್ಚು ಸಿಸಿಟಿವಿಗಳು ಕಾರ್ಯನಿರ್ವಹಿಸಲಿವೆ.
‘ಪ್ರೀ ಮೆಟ್ರಿಕ್’ ವಿದ್ಯಾರ್ಥಿಗಳಿಗೆ ‘ಸ್ಕಾಲರ್ ಶಿಪ್’ ನೀಡುವಂತೆ ಸಿದ್ದರಾಮಯ್ಯ ಆಗ್ರಹ
ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹೆಚ್ಚುವರಿ ಪೊಲೀಸರು ಬಂದೋಬಸ್ತ್ ಮಾಡಲಾಗಿದೆ ನಗರ ಸೇರಿದಂತೆ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ 25 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಹಲವರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದ್ರೆ ನಿರ್ಧಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಹಾಗೂ ಎಸ್ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ.
‘ಪ್ರೀ ಮೆಟ್ರಿಕ್’ ವಿದ್ಯಾರ್ಥಿಗಳಿಗೆ ‘ಸ್ಕಾಲರ್ ಶಿಪ್’ ನೀಡುವಂತೆ ಸಿದ್ದರಾಮಯ್ಯ ಆಗ್ರಹ