ಸ್ಯಾನ್ ಫ್ರಾನ್ಸಿಸ್ಕೋ: ಇತ್ತೀಚೆಗೆ ಎಲಾನ್ ಮಸ್ಕ್ (Elon Musk) ʻಟ್ವಿಟ್ಟರ್(Twitter) ಅನ್ನು ಸ್ವಾಧೀನಪಡಿಸಿಕೊಂಡ ನಂತ್ರ, ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಇದರ ಬೆನ್ನಲ್ಲೇ, ಮಸ್ಕ್ ಮಾಡಿದ ಕೆಲಸವೊಂದು ಉದ್ಯೋಗಿಗಳಲ್ಲಿ ಅಚ್ಚರಿ ಮೂಡಿಸಿದೆ.
ಹೌದು, ಮಸ್ಕ್ ಸ್ಯಾನ್ ಫ್ರಾನ್ಸಿಸ್ಕೋದ ಟ್ವಿಟ್ಟರ್ ಕಂಪನಿಯ ಕೆಲವೊಂದು ಕೊಠಡಿಗಳನ್ನು ಸಣ್ಣ ಮಲಗುವ ಕೋಣೆ(bedrooms) ಗಳಾಗಿ ಪರಿವರ್ತಿಸಿದ್ದಾರೆ. ಈ ಬೆಡ್ರೂಮ್ಗಳಲ್ಲಿ ಹಾಸಿಗೆಗಳು, ಡ್ರ್ಯಾಬ್ ಕರ್ಟನ್ಗಳು ಮತ್ತು ಕೆಲಸ ಮಾಡುವ ಕಂಪ್ಯೂಟರ್ಗಳನ್ನೂ ಅಳವಡಿಸಲಾಗಿದೆ.
ಟ್ವಿಟ್ಟರ್ ಕಂಪನಿಯಲ್ಲಿ ರಾತ್ರಿಯಿಡೀ ಕೆಲಸ ಮಾಡುವ ತನ್ನ ಉದ್ಯೋಗಿಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕ್ರಮದ ಬಗ್ಗೆ ಮಸ್ಕ್ ಅಥವಾ ಕಂಪನಿಯಿಂದ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಆದ್ರೆ, ಇದು ನೌಕರರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಈ ಕಟ್ಟಡದ ಪ್ರತಿ ಅಂತಸ್ತಿನಲ್ಲಿ ನಾಲ್ಕರಿಂದ ಎಂಟು ಅಂತಹ ಕೊಠಡಿಗಳನ್ನು ಈ ರೀತಿಯಾಗಿ ಸಿದ್ಧಪಡಿಸಲಾಗಿದೆ. ಆದ್ರೆ, ಈ ರೀತಿ ಮಾಡಿರುವುದು ಅರಿಯಲ್ಲ. ಇದು ಅಗೌರವದ ಮತ್ತೊಂದು ಅಘೋಷಿತ ಸಂಕೇತವಾಗಿದೆ ಎಂದು ಕೆಲ ಉದ್ಯೋಗಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಒಳಮೀಸಲಾತಿ ಆಗ್ರಹಿಸಿ ಸಿಎಂ ಮುಂದೆಯೇ ದಲಿತ ಸಂಘಟನೆಗಳು ಪ್ರತಿಭಟನೆ