ಮಂಡ್ಯ: ಮದ್ದೂರು ಬೈಪಾಸ್ ಸಂಚಾರ ಇಂದು ಮತ್ತು ನಾಳೆ ಓಪನ್ ಆಗಿದೆ. ಐದಾರು ದಿನ ತಡವಾಗಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಜನರ ಕ್ಷಮೆ ಕೋರಿದ್ದಾರೆ.
BIGG NEWS: ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಸಿದ್ಧ; ಸಿಎಂ ಬೊಮ್ಮಾಯಿ
ಈಗಾಗಲೇ ನವೆಂಬರ್ ಅಂತ್ಯದ ವೇಳೆ ಮದ್ದೂರು ಬೈಪಾಸ್ ಓಪನ್ ಆಗುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಆದ್ರೆ ಐದಾರು ದಿನ ಮಳೆಯಿಂದ ಬೈಪಾಸ್ ಕಾಮಗಾರಿ ತಡವಾಗಿದೆ. ಎಕ್ಸ್ ಪೆಂಕ್ಷನ್ ಜಾಯಿಂಟ್ ಕೆಲಸ ಮುಕ್ತಾಯವಾಗಿದೆ ಸೇಫ್ಟಿ ಆಡಿಟಿಂಗ್, ಲೋಡ್ ಟೆಸ್ಟಿಂಗ್, ಮಾರ್ಕಿಂಗ್ ಕೂಡ ಮುಗಿದಿದೆ. ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ್ರೆ ಮೈ-ಬೆಂ ಸಂಚರಿಸುವವರಿಗೆ ಕನಿಷ್ಠ 15-20 ನಿಮಿಷ ಉಳಿಯುತ್ತೆ ಎಂದು ಮಾಹಿತಿ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಶ್ರೀರಂಗಪಟ್ಟಣ ಬೈಪಾಸ್ ಕೂಡ ಓಪನ್ ಆಗಲಿದ್ದು, ಹನಕರೆ, ಯಲಿಯೂರು, ಇಂಡವಾಳು ಸೇರಿದಂತೆ ಹಲವಡೆ ಅಂಡರ್ ಪಾಸ್ ಕಾಮಗಾರಿ ಆಗಬೇಕಿದೆ.ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಪೂರ್ಣ ಆಗಲು ಇನ್ನು ಎರಡು ತಿಂಗಳು ಬೇಕಿದೆ.