ಉಡುಪಿ : ಜಿಲ್ಲೆಯಲ್ಲೂ ಧರ್ಮ ಸಂಘರ್ಷ ಶುರುವಾಗಿದ್ದು, ಕುಂದಾಪುರ ತಾಲೂಕಿನಲ್ಲಿ ಎರಡು ಮಹತ್ವದ ಜಾತ್ರೆಗಳಲ್ಲಿ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದಾರೆ.
ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಭಯೋತ್ಪಾದನೆ, ಲವ್ ಜಿಹಾದ್ ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಹಿಂದೂ ಸಂಘಟನೆಗಳು ಈ ರೀತಿಯ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಸಂಘಟನೆಗಳ ಬೇಡಿಕೆಗೆ ವ್ಯವಸ್ಥಾಪನಾ ಸಮಿತಿ ಸಮ್ಮತಿಸುವ ಸಾಧ್ಯತೆಯಿದೆ ಹಾಗಾಗಿ ಜಿಲ್ಲೆಯ ಪ್ರಸಿದ್ದ ಕೋಟೇಶ್ವರದ ಕೋಡಿ ಹಬ್ಬ & ಉಪ್ಪಂದ ಜಾತ್ರೆಗಳು ಡಿಸೆಂಬರ್ 8 -9 ರಂದು ಶುರುವಾಗಲಿದ್ದು, ಈ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮನವಿ ಮಾಡಲಾಗಿದೆ.