ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವವರ ಮೊಂಡಾಟ ಮುಂದುವರೆದಿದ್ದು, ಬೆಳಗಾವಿ ಭೇಟಿ ರದ್ದು ಮಾಡಿಲ್ಲ. ಮುಂದೂಡಿಕೆ ಮಾಡಿದ್ದೇವೆ ಎಂದು ಸಚಿವ ಶಂಭುರಾಜ್ ದೇಸಾಯಿ ಹೇಳಿದ್ದಾರೆ.
BIGG NEWS : `SSLC’ ಹಾಗೂ ನಂತರ ತರಗತಿಯ ಅಂಧ ವಿದ್ಯಾರ್ಥಿಗಳಿಗೆ `ಬ್ರೈಲ್ ಕಿಟ್’ ಗಳ ವಿತರಣೆಗೆ ಅರ್ಜಿ ಅಹ್ವಾನ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗಾವಿ ಭೇಟಿ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಆದರೆ ಅಂಬೇಡ್ಕರ್ ಪರಿನಿರ್ವಾಣ ಹಿನ್ನೆಲೆಯಲ್ಲಿ ಇಂದು ಭೇಟಿ ರದ್ದು ಮಾಡಿಲ್ಲ. ಬದಲಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ರಾಜೀ ಮಾಡಿಕೊಳ್ಳುವ ಮಾತೇ ಇಲ್ಲ. ಬೆಳಗಾವಿ ಭೇಟಿ ರದ್ದು ಮಾಡಿಲ್ಲ. ಮುಂದೂಡಿಕೆ ಮಾಡಿದ್ದೇವೆ ಅಷ್ಟೇ. ಶೀಘ್ರವೇ ಬೆಳಗಾವಿಗೆ ಭೇಟಿ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಸಚಿವರು ಮತ್ತೆ ಮೊಂಡಾಟ ಮುಂದುವರೆಸಿದ್ದಾರೆ.