ಬೆಂಗಳೂರು: ಜಿ20 ಶೃಂಗಸಭೆಯ ಭಾರತದ ಅಧ್ಯಕ್ಷತೆ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ “ನನ್ನ ಆರೋಗ್ಯ ವಿಚಾರಿಸಿದ್ದಕ್ಕಾಗಿ ಪ್ರಧಾನಿಯವರಿಗೂ ನಾನು ಕೃತಜ್ಞನಾಗಿದ್ದೇನೆ”ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
BIGG NEWS : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಉಗ್ರ ಶಾರೀಕ್ ಅಕೌಂಟ್ ಗೆ ಹರಿದು ಬರುತ್ತಿತ್ತು ಡಾಲರ್ ಮನಿ!
ಪ್ರಧಾನಿ ಜತೆಗಿನ ಫೋಟೋ ಜತೆಗೆ ಪತ್ರದೊಂದಿಗೆ ಟ್ವೀಟ್ ಮಾಡಿರುವ ಅವರು, ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವುದು ಬಹಳಷ್ಟು ಒಳ್ಳೆಯ ವಿಷಯಗಳ ಆರಂಭ”. “ವಸುದೈವ ಕುಟುಂಬಕಂ”ಎಂಬ ದೃಷ್ಟಿಕೋನದಿಂದ ಜಗತ್ತನ್ನು ನೋಡುವಲ್ಲಿ ಈ ಅವಕಾಶ ಮಹತ್ವದ್ದಾಗಿದೆ. ಜಿ20 ಒಕ್ಕೂಟವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
I was at the meeting called by PM @narendramodi to discuss India’s G20 presidency, y’day. “To see the world as one family is a beginning of a lot of good things” is what I feel. Here is my statement. I am also thankful to the PM for enquiring after my health. @g20org @PMOIndia pic.twitter.com/1M3lvdHLRM
— H D Devegowda (@H_D_Devegowda) December 6, 2022
ಆರ್ಥಿಕತೆ, ತಂತ್ರಜ್ಞಾನ, ವಿಜ್ಞಾನ, ಸಾಮಾಜಿಕತೆ ಹಾಗೂ ಪರಿಸರ ಕ್ಷೇತ್ರವೂ ಸೇರಿದಂತೆ ವಿಶ್ವಕ್ಕೆ ಅಗಾಧವಾದ ಕೊಡುಗೆ ನೀಡುವುದಕ್ಕಾಗಿ ಈ ವೇದಿಕೆ ಭಾರತಕ್ಕೆ ಮಹತ್ವದ್ದಾಗಿದೆ. ಭಾರತ ಒಂದು ಯುವ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಸೌಹಾರ್ದ ವಾತಾವರಣದಲ್ಲಿ ಈ ವೇದಿಕೆಯ ಅಧ್ಯಕ್ಷೆತಯನ್ನು ವಹಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಬಾಂಧವ್ಯ ವೃದ್ಧಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
BIGG NEWS : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಉಗ್ರ ಶಾರೀಕ್ ಅಕೌಂಟ್ ಗೆ ಹರಿದು ಬರುತ್ತಿತ್ತು ಡಾಲರ್ ಮನಿ!
ರಷ್ಯಾ-ಉಕ್ರೇನ್ ಉದ್ವಿಗ್ನ ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲೂ ಅವರು ತೆಗೆದುಕೊಂಡ ನಿಲುವನ್ನು ನಾನು ಶ್ಲಾಘಿಸುತ್ತೇನೆ. ಇಂದು ನಡೆದ ಸಭೆ ಮಹತ್ವದ್ದಾಗಿದೆ. ಸಭೆ ಬಳಿಕ ನನ್ನ ಆರೋಗ್ಯ ವಿಚಾರಿಸಿದ ಪ್ರಧಾನಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.