ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಹಿರಂಗ ಸಭೆ ನಡೆಸಲಿದೆ.
Shocking News: ಸೋದರ ಸಂಬಂಧಿಯ ತಲೆ ಕತ್ತರಿಸಿ, ಸೆಲ್ಫಿ ತೆಗೆದು ವಿಕೃತಿ ಮೆರೆದ ಪಾಪಿ
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದಲ್ಲಿ ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ಎಂ.ಇ.ಎಸ್. ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಕರವೇ ಕಿಡಿಕಾರಿದ್ದು, ಇಂದು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಿದೆ.
ಇಂದು ಕರ್ನಾಟಕ ರಕ್ಷಣಾ ವೇದಿಕೆ ಬಹಿರಂಗ ಸಭೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಡಿಸಿಪಿ, ನಾಲ್ವರು ಸಿಪಿಐ, 10 ಪಿಎಸ್ ಐ, 12 ಕೆಎಸ್ ಆರ್, 8 ಸಿಎಆರ್ ತುಕಡಿಗಳು ಹಾಗೂ ಅಶ್ರುವಾಯು ಪ್ರಯೋಗ ವರುಣಾ ವಾಹನ ನಿಯೋಜನೆ ಮಾಡಲಾಗಿದೆ.