ನೊಯ್ಡಾ: ಇಂದು ಬಾಬ್ರಿ ಮಸೀದಿ ಧ್ವಂಸವಾಗಿ 30 ವರ್ಷ ಪೂರೈಸಿದ ಹಿನ್ನೆಲೆ “ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಅಖಿಲ ಭಾರತ ಹಿಂದು ಮಹಾ ಸಭಾ ಕರೆ “ನೀಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಅಯೋಧ್ಯೆ, ಮಥುರಾ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ
BIGG NEWS: ಉಡುಪಿಯಲ್ಲಿ ಧರ್ಮ ದಂಗಲ್ ಮತ್ತೆ ಶುರು; ಜಾತ್ರೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ
ಭಗವಾನ್ ಕೃಷ್ಣನ ನಿಜವಾದ ಜನ್ಮಸ್ಥಳ ಎಂದು ಕರೆಯಲಾಗುವ ಮಥುರಾದಲ್ಲೂ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಥುರಾ ಸುತ್ತಮುತ್ತ ಡ್ರೋನ್ಗಳ ಮೂಲಕ ಕಣ್ಗಾವಲು ನಡೆಸಲಾಗುತ್ತಿದೆ ಹೊರಗಿನಿಂದ ಬರುವ ವಾಹನಗಳ ಮೇಲೂ ಪೊಲೀಸರಿಂದ ಹದ್ದಿನಕಣ್ಣು ಇಡಲಾಗಿದೆ
BIGG NEWS: ಉಡುಪಿಯಲ್ಲಿ ಧರ್ಮ ದಂಗಲ್ ಮತ್ತೆ ಶುರು; ಜಾತ್ರೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ
1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಇಂದು 30ನೇ ವರ್ಷದ ‘ಸನಾತನ ಸಮರ್ಪಣ ದಿವಸ್’ ಆಚರಿಸಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಹಾಗಾಗಿ ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್ ಅವರು ಇಡೀ ಮಥುರಾದಲ್ಲಿ ಭದ್ರತೆಯ ಬಗ್ಗೆ ನಿಗಾ ಇಡುವಂತೆ ಪೊಲೀಸ್ ಸಿಬ್ಬಂದಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಅಖಿಲ ಭಾರತ ಹಿಂದು ಮಹಾ ಸಭಾ ಹನುಮಾನ್ ಚಾಲೀಸಾ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ. ಕಾನೂನು ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಶೈಲೇಶ್ ಪಾಂಡೆ ಎಚ್ಚರಿಕೆ ನೀಡಿದ್ದಾರೆ
BIGG NEWS: ಉಡುಪಿಯಲ್ಲಿ ಧರ್ಮ ದಂಗಲ್ ಮತ್ತೆ ಶುರು; ಜಾತ್ರೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ