ಬೊಗೋಟಾ: ಧಾರಾಕಾರ ಮಳೆಯಿಂದ ಮಧ್ಯ ಕೊಲಂಬಿಯಾ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಎರಡು ವಾಹನಗಳ ಮೇಲೆ ಮಣ್ಣು ಕುಸಿದ ಪರಿಣಾಮ ಬಸ್ನಲ್ಲಿದ್ದ 34 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೋಮವಾರ ತಿಳಿಸಿದ್ದಾರೆ.
ಮೃತರಲ್ಲಿ ಎಂಟು ಮಕ್ಕಳು ಸೇರಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ. ಕೊಲಂಬಿಯಾದ ರಿಸಾರಾಲ್ಡಾ ಜಿಲ್ಲೆಯ ಪ್ಯೂಬ್ಲೋ ರಿಕೊ ಪಟ್ಟಣದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಮಣ್ಣಿನಲ್ಲಿ ಹೂತು ಹೋಗಿದ್ದ ಬಸ್ನಲ್ಲಿ 33 ಮಂದಿ ಇದ್ದರು ಮತ್ತು ಕಾರಿನಲ್ಲಿ ಆರು ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೇ, ಇಬ್ಬರಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೇ, ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ರಕ್ಷಣಾ ತಂಡದವರು ಸಂತ್ರಸ್ತರನ್ನು ಬದುಕಿಸುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕೊಲಂಬಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಪ್ರಕಾರ, ಲಾ ನಿನಾ ಹವಾಮಾನ ವಿದ್ಯಮಾನದಿಂದ ಉಂಟಾದ ಭಾರೀ ಮಳೆಯಿಂದಾಗಿ ಪಟ್ಟಣವು ಮಣ್ಣು ಕುಸಿತದ ಅಪಾಯದಲ್ಲಿದೆ.
BIG NEWS : ಶೀಘ್ರದಲ್ಲೇ ಯುಕೆ ಪ್ರಜೆಗಳಿಗೆ ಭಾರತದ ಇ-ವೀಸಾ ಸೇವೆ ಲಭ್ಯ : ಭಾರತೀಯ ಹೈಕಮಿಷನ್ ಮಾಹಿತಿ
BIGG NEWS : `KSRP-IRB’ ನೇಮಕಾತಿಯ ಲಿಖಿತ ಪರೀಕ್ಷೆಗೆ ದಿನಾಂಕ ನಿಗದಿ : ಇಲ್ಲಿದೆ ಮಾಹಿತಿ
BIG NEWS : ಶೀಘ್ರದಲ್ಲೇ ಯುಕೆ ಪ್ರಜೆಗಳಿಗೆ ಭಾರತದ ಇ-ವೀಸಾ ಸೇವೆ ಲಭ್ಯ : ಭಾರತೀಯ ಹೈಕಮಿಷನ್ ಮಾಹಿತಿ