ಕೋಲಾರ : ಕೋಲಾರದಲ್ಲೂ ಚಿರತೆ ಆತಂಕ ಎದುರಾಗಿದ್ದು, ಕಳೆದ 15 ದಿನದಿಂದ ಚಿರತೆ ಜನರ ನಿದ್ದೆಗೆಡಿಸಿದೆ.
ಹೌದು, ಓಬಟ್ಟಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆ ಮನೆಗಳಲ್ಲಿರುವ ಕೋಳಿ, ಕುರಿಯನ್ನು ತಿಂದು ಹಾಕಿದೆ. ರಾತ್ರಿ ಮನೆಯಿಂದ ಹೊರಗೆ ಹೋಗಲು ಕೂಡ ಜನರು ಹೆದರುತ್ತಿದ್ದು, ಯಾವಾಗ ಚಿರತೆ ಬರುತ್ತೋ..ಏನಾಗುತ್ತದೆಯೋ ಎಂಬ ಭಯ ಜನರಲ್ಲಿದೆ. ಚಿರತೆ ಸೆರೆಹಿಡಿಯುವಂತೆ ಅರಣ್ಯ ಅಧಿಕಾರಿಗಳನ್ನು ಜನರು ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರು, ಮೈಸೂರು, ಬಳ್ಳಾರಿಯಲ್ಲೂ ಚಿರತೆ ಭಾರೀ ಭಯ ಹುಟ್ಟಿಸಿತ್ತು. ಇದೀಗ ಕೋಲಾರದಲ್ಲಿ ಆತಂಕ ಶುರುವಾಗಿದೆ.
ಕೊರೊನಾಗೆ ‘ರಮ್’ ಮದ್ದು ಎಂದಿದ್ದ ‘ಕೌನ್ಸಿಲರ್’ ಅಮಾನತು ಮಾಡಿದ ಕಾಂಗ್ರೆಸ್