ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಚಿಗುರಿಯುತ್ತಿದೆ. ಅದರಲ್ಲಿ ರೌಡಿಶೀಟರ್ ಗಳು ಬಿಜೆಪಿ ಸೇರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ.
‘ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ’ : ಡಿಕೆಶಿಗೆ ಸಚಿವ ಆರಗ ಜ್ಞಾನೇಂದ್ರ ತಿರುಗೇಟು
ಇತ್ತೀಚೆಗೆ ಸಿ.ಟಿ ರವಿ ಮಾಜಿ ರೌಡಿಶೀಟರ್ ಎಂದು ಕೂಡ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಸದ್ಯ ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ರೌಡಿಶೀಟರ್ ಹಾಕಲಾಗಿತ್ತು. ನಾನು ಯಾವುದೇ ಗೂಂಡಾಗಿರಿ ಮಾಡಿರಲಿಲ್ಲ.
‘ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ’ : ಡಿಕೆಶಿಗೆ ಸಚಿವ ಆರಗ ಜ್ಞಾನೇಂದ್ರ ತಿರುಗೇಟು
ನನ್ನ ಮೇಲೆ ಇರುವುದೆಲ್ಲಾ ಸಾರ್ವಜನಿಕ ಹೋರಾಟದ ಕೇಸ್ಗಳು. ನಾನು ಕೊತ್ವಾಲ್ ರಾಮಚಂದ್ರ, ಜಯರಾಜ್ನ ಶಿಷ್ಯನಲ್ಲ. ನಾನು ಅವರ ಶಿಷ್ಯ ಎಂದು ಹೇಳಿ ಹೆಮ್ಮೆಪಡುವ ರಾಜಕೀಯ ನೇತಾರನೂ ನಾನಲ್ಲ ಎಂದು ಸಿ.ಟಿ.ರವಿ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.
ಎಲ್ಲಾ ರೌಡಿಶೀಟರ್ಗಳು ರೌಡಿಗಳಲ್ಲ ಅಂತಾ ಹೇಳಿದ್ದೆ. ರೌಡಿಶೀಟರ್ನಲ್ಲಿರೋ ಎಲ್ಲರಿಗೂ ಕ್ಲೀನ್ ಚಿಟ್ ನಾನು ಕೊಟ್ಟಿಲ್ಲ. ನಿಮ್ಮ ಪಕ್ಷದ ಆರ್.ವಿ ದೇವರಾಜ್, ಹರಿಪ್ರಸಾದ್ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.