ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿತ್ತು. ಆದ್ರೆ, ಈಗ ಎಲ್ಲ ನಿಯಮಗಳು ಬದಲಾಗಿವೆ. ಚಾಲನಾ ಪರವಾನಿಗೆ ಇಲ್ಲದೆ ವಾಹನಗಳನ್ನ ಓಡಿಸುವುದು ಕಷ್ಟ. ಚಾಲಕನು ಪರವಾನಗಿ, ಆರ್ಸಿ, ಮಾಲಿನ್ಯ ಪ್ರಮಾಣ ಪತ್ರ, ವಿಮೆ ಮುಂತಾದ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಿಗೆ ಇಲ್ಲದೇ ವಾಹನ ಚಲಾಯಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಮೇಲಿನ ಯಾವುದೇ ದಾಖಲೆಗಳಿಲ್ಲದೆ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದರೆ, 2 ಸಾವಿರದಿಂದ 5 ಸಾವಿರ ರೂಪಾಯಿವರೆಗೆ ದಂಡ ತೆರಬೇಕಾಗುತ್ತದೆ. ಅದಕ್ಕಾಗಿಯೇ ಚಾಲಕರು ಚಾಲನಾ ಪರವಾನಗಿಯನ್ನ ಹೊಂದಿರುವುದು ಕಡ್ಡಾಯವಾಗಿದೆ. ಆದ್ರೆ, ಈಗ ನಾವು ನಿಮಗೆ ಒಂದು ವಿಷಯವನ್ನ ಹೇಳಲಿದ್ದೇವೆ. ನಿಮ್ಮ ಬಳಿ ಈ ಒಂದು ಅಪ್ಲಿಕೇಶನ್ ಇದ್ದರೇ ಸಾಕು ನಿಮ್ಮ ಬಳಿ ಲೈಸೆನ್ಸ್ ಅಥವಾ ಆರ್ ಸಿ ಇಲ್ಲದಿದ್ದರೂ ಚಲನ್ ನೀಡುವುದಿಲ್ಲ.
ಡಿಜಿಟಲ್ ಇಂಡಿಯಾವನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ವಾಹನ ಚಲಾಯಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನ ಪಡೆಯಲು ಹಲವಾರು ಅಪ್ಲಿಕೇಶನ್ಗಳನ್ನ ರಚಿಸಿದೆ. ಅವು DigiLocker, mParivahan ಮೊಬೈಲ್ ಅಪ್ಲಿಕೇಶನ್ಗಳು. ಈ ಆ್ಯಪ್ಗಳಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ, ಮಾಲಿನ್ಯ ಪ್ರಮಾಣ ಪತ್ರ, ವಿಮೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು. ಯಾವಾಗ ಬೇಕಾದ್ರೂ, ಎಲ್ಲಿ ಬೇಕಾದರೂ ಬಳಸಬಹುದು. ಈ ಎರಡೂ ಅಪ್ಲಿಕೇಶನ್ಗಳು ಅಧಿಕೃತ ಮತ್ತು ದೇಶದಾದ್ಯಂತ ಮಾನ್ಯವಾಗಿವೆ.
ಹಾರ್ಡ್ ಕಾಪಿ ಇಡುವ ಅಗತ್ಯವಿಲ್ಲ.!
ಈ ಯಾವುದೇ ದಾಖಲೆಗಳಿಲ್ಲದೇ ನೀವು ರಸ್ತೆಯಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ನೀವು ಭಾರೀ ದಂಡವನ್ನ ಪಾವತಿಸಬೇಕಾಗುತ್ತೆ. ಆದ್ದರಿಂದ, ನಿಮ್ಮ ವಾಹನವನ್ನ ರಸ್ತೆಯಲ್ಲಿ ತೆಗೆದುಕೊಳ್ಳುವ ಮೊದಲು, ನಿಮ್ಮ ಬಳಿ ಎಲ್ಲಾ ಅಗತ್ಯ ದಾಖಲೆಗಳು ಲಭ್ಯವಿವೆ ಎಂದು ಖಚಿತಪಡಿಸಿಕೊಳ್ಳಿ. ಆದ್ರೆ, ಭಾರತ ಡಿಜಿಟಲ್ ಆಗುತ್ತಿರುವುದರಿಂದ ವಾಹನ ಚಾಲನೆಗೆ ಬೇಕಾದ ದಾಖಲೆಗಳ ಹಾರ್ಡ್ ಕಾಪಿಗಳು ಇಲ್ಲದಿದ್ದರೂ ಪರವಾಗಿಲ್ಲ. DigiLocker, mParivahan ಮೊಬೈಲ್ ಅಪ್ಲಿಕೇಶನ್ನಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನ ಸುಲಭವಾಗಿ ಪ್ರವೇಶಿಸಬಹುದು. ಏತನ್ಮಧ್ಯೆ, 2018ರಲ್ಲಿ ಭಾರತ ಸರ್ಕಾರದ ರಸ್ತೆಗಳು ಮತ್ತು ಸಾರಿಗೆ ಸಚಿವಾಲಯವು ಡಿಜಿಲಾಕರ್ ಮತ್ತು ಎಂಪರಿವಾಹನ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಅಪ್ಲೋಡ್ ಮಾಡಲಾದ ದಾಖಲೆಗಳ ದೃಢೀಕರಣವನ್ನ ಪರಿಶೀಲಿಸಲು ನಿರ್ದೇಶನಗಳನ್ನ ನೀಡಿದೆ.
BIGG NEWS: ಸ್ಯಾಂಡಲ್ ವುಡ್ ಹಿರಿಯ ನಟ ದ್ವಾರಕೀಶ್ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ
BIGG NEWS : ‘NEP’ ಜಾರಿ ವಿರೋಧಿಸಿ ಡಿ.17 ರಂದು ರಾಜ್ಯದ ವಿಶ್ವವಿದ್ಯಾಲಯ ಬಂದ್ ಗೆ ‘NSUI’ ಕರೆ