ದಾವಣಗೆರೆ : ರೌಡಿಗಳ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್’ , ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಓರ್ವ ರೌಡಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಪರೋಕ್ಷವಾಗಿ ಡಿಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೇಣುಕಾಚಾರ್ಯ ರೌಡಿ ಕೊತ್ವಾಲ್ ಶಿಷ್ಯ ಡಿಕೆಶಿ ಎಂಬುದು ಎಲ್ಲರಿಗೂ ಗೊತ್ತು, ರೌಡಿಗಳನ್ನು ಪೋಷಿಸಿದ್ದೇ ಕಾಂಗ್ರೆಸ್ ಎಂದು ವಾಗ್ಧಾಳಿ ನಡೆಸಿದರು.
ಮ್ಯಾನ್ ಪವರ್ ಹಾಗೂ ಮನಿ ಪವರ್ ನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಲ್ಲೇ ಎಲ್ಲಾ ರೌಡಿಗಳು ಇರೋದು, ರೌಡಿಗಳ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್, ಬಿಜೆಪಿ ಗೂಂಡಾಗಳ ಮನಸ್ಸು ಪರಿವರ್ತನೆ ಮಾಡಿದೆ, ಆದರೆ ಕಾಂಗ್ರೆಸ್ ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಹೊಂದಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್ ಮೇಲೆ ನಾಲಿಗೆ ಹರಿಬಿಡುವ ಸಚಿವರೇ ಮಹಾರಾಷ್ಟ್ರದ ಬಗ್ಗೆ ಮೌನವೇಕೆ?: ಟ್ವಿಟ್ ನಲ್ಲಿ ಕಾಂಗ್ರೆಸ್ ಗುಡುಗು
BIGG NEWS: ಕರ್ನಾಟಕದ ಎಚ್ಚರಿಕೆಗೆ ಮಣಿದ ಮಹಾರಾಷ್ಟ್ರ; ಬೆಳಗಾವಿಗೆ ಸಚಿವರ ಭೇಟಿ ರದ್ದು