ಕೋಲಾರ: ಜಿಲ್ಲೆಯ ಮಾಲೂರು ತಾಲೂಕು ಚಂಬೆ ಗ್ರಾಮದಲ್ಲಿ ಕಾಣೆಯಾದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದೆ.
BREAKING NEWS : ಮಹಾರಾಷ್ಟ್ರ ಸಚಿವರು ಕಾನುನು ಉಲ್ಲಂಘನೆ ಮಾಡಿದ್ರೆ ಕ್ರಮ : ಗೃಹ ಸಚಿವ ಅರಗಜ್ಞಾನೇಂದ್ರ ಎಚ್ಚರಿಕೆ
ಆನಂದ್ ಕೊಲೆಯಾದ ವ್ಯಕ್ತಿ. ನವೆಂಬರ್ 21 ರಂದು ಕಾಣೆಯಾಗಿದ್ದರು. ಈ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.ತನಿಖೆ ವೇಳೆ ಇದೊಂದು ಕೊಲೆ ಎಂದು ಕಂಡಬಂದಿತ್ತು. ಈ ಶವ ಆನಂದ್ ಅವರದು ಎಂದು ಗೊತ್ತಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣ ಬಯಲು ಆಗಿದೆ.
BREAKING NEWS : ಮಹಾರಾಷ್ಟ್ರ ಸಚಿವರು ಕಾನುನು ಉಲ್ಲಂಘನೆ ಮಾಡಿದ್ರೆ ಕ್ರಮ : ಗೃಹ ಸಚಿವ ಅರಗಜ್ಞಾನೇಂದ್ರ ಎಚ್ಚರಿಕೆ
ಮೃತ್ ಆನಂದ್ ಅವರ ಪತ್ನಿ ಚೈತ್ರ ಹಾಗೂ ಚಲಪತಿ ಎಂಬಾತನ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಆನಂದನಿಗೆ ಗೊತ್ತಾಗಿ ಗಲಾಟೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಪತ್ನಿ ಪ್ರಿಯಕರನ ಮೂಲಕ ಆತನನ್ನು ಕೊಲೆ ಮಾಡಿಸಿದ್ದಾಳೆ. ಕೊಲೆಗೆ ಚಲಪತಿ ಪೃಥ್ವಿರಾಜ್ , ನವೀನ್ ಎಂಬಿಬ್ಬರು ಸಹಕರಿಸಿದ್ದಾರೆ. ಇದೀಗ ಆರೋಪಿಗಳಾದ ಚಲಪತಿ, ಪತ್ನಿ ಚೈತ್ರ, ಪೃಥ್ವಿರಾಜ್ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನವೀನ್ ಗಾಗಿ ಶೋಧ ನಡೆಯುತ್ತಿದೆ.