ಬೆಂಗಳೂರು : ಕರ್ನಾಟಕದಲ್ಲಿ ರೌಡಿಸಂ ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷದ ನಾಯಕರು, ಅವರ ಇತಿಹಾಸ ನೋಡಿದರೆ ಎಲ್ಲಾ ಗೊತ್ತಾಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಹೆಚ್ಚಾದ ಟ್ರಾಫಿಕ್ ಸಮಸ್ಯೆ; ಬೆಳಗ್ಗೆ 8.30 ರ ನಂತರ ಶಾಲಾ ಬಸ್ಗಳ ಸಂಚಾರಕ್ಕೆ ನಿಷೇಧ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಡಿಸಂ ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷದವರು, ಕಾಂಗ್ರೆಸ್ ನಾಯಕರ ಇತಿಹಾಸ ನೋಡಿದರೆ ಯಾರ್ಯಾರ ಹಿನ್ನೆಲೆ ಏನಿದೆ ಅಂತ ಗೊತ್ತಾಗುತ್ತದೆ. ಕಾಂಗ್ರೆಸ್ ನಾಯಕರ ಈಗಿನ ಮಾತುಗಳನ್ನು ಕೇಳಿದ್ದೇನೆ. ಅವರ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
BREAKING NEWS : ರಾಜ್ಯದಲ್ಲಿ ಪ್ರತ್ಯೇಕ `ಕೇಸರಿ ಶಾಲೆ’ ಆರಂಭ ವಿಚಾರ : ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ
ಕಾಂಗ್ರೆಸ್ ನಾಯಕರು ಕಡಿಮೆ ಮಾತನಾಡಿದಷ್ಟು ಅವರಿಗೇ ಒಳ್ಳೆಯದು. ಇಲ್ಲದಿದ್ದರೆ ಅವರೇ ಅವರ ಇತಿಹಾಸವನ್ನು ರಾಜ್ಯದ ಜನರ ಮುಂದೆ ಹೇಳಿಕೊಂಡಂತಾಗುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.