ಜೈಪುರ: ನಟಿ ಹನ್ಸಿಕಾ ಮೋಟ್ವಾನಿ ತನ್ನ ದೀರ್ಘಕಾಲದ ಗೆಳೆಯ ಸೊಹೇಲ್ ಕಥುರಿಯಾ ಅವರನ್ನು ಭಾನುವಾರ ವಿವಾಹವಾದರು. ಜೈಪುರದ ಬಳಿಯ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆ ನಡೆಯಿತು. ಮದುವೆಯ ಮೊದಲ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹನ್ಸಿಕಾ ಮೊದಲ ಬಾರಿಗೆ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪೋಸ್ ನೀಡಿದ್ದರೆ, ಅವರ ಗ್ರ್ಯಾಂಡ್ ಎಂಟ್ರಿಯ ವೀಡಿಯೊವನ್ನು ಅಭಿಮಾನಿಗಳ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ.