ಬೆಂಗಳೂರು : ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ. ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ! ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ.ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ? ಉದ್ಘಾಟನೆಗೆ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ? ಎಂದು ವ್ಯಂಗ್ಯವಾಡಿದೆ.
ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ!
ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ.@BJP4Karnataka,
ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ?
ಉದ್ಘಾಟನೆಗೆ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ?! pic.twitter.com/FE6eGGLhcj— Karnataka Congress (@INCKarnataka) December 4, 2022
ರೌಡಿಗಳನ್ನು ರೌಡಿಗಳೆನ್ನಬೇಡಿ – ಇದು ಮಾಜಿ ರೌಡಿ ಶೀಟರ್ ಸಿ.ಟಿ.ರವಿ ಫಾರ್ಮಾನು, ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ, ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ. ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ ಇದು ಬಿಜೆಪಿಯ ಹೊಸ ದ್ಯೇಯವಾಕ್ಯ ಎಂದು ಕಿಡಿಕಾರಿದೆ.
ಪರೋಡಿಗಳಿಂದ ರೌಡಿಗಳ ಸಮರ್ಥನೆ, ಬಿಜೆಪಿ ಸೇರಿದರೆ ಸಮಾಜಘಾತುಕರಿಗೂ ಸಮಾಜ ಸೇವಕರ ಬಿರುದು ನೀಡಲಾಗುತ್ತದೆ ಎಂಬುದಕ್ಕೆ ಸಂಸದ ಪ್ರತಾಪ್ ಸಿಂಹ ಅವರ ರೌಡಿಗಳ ಪರ ಸಮರ್ಥನೆಯೇ ಸಾಕ್ಷಿ. ಕೊಲೆ, ಸುಲಿಗೆ, ದರೋಡೆ ಮಾಡಿದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಬಿಜೆಪಿ ನಿರ್ಲಜ್ಜತನದ ಪರಮಾವಧಿಯನ್ನು ತಲುಪಿದೆ ಬಿಜೆಪಿ. ಬಿಜೆಪಿಯ ಅಸಲಿ ಸಂಸ್ಕೃತಿ ಬೆತ್ತಲಾಗಿದೆ ಎಂದು ವಾಗ್ದಾಳಿ ನಡೆಸಿದೆ.