ಕೊಪ್ಪಳ : ಡಿಸೆಂಬರ್ 5 ರ ಇಂದು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ತೆರಳಲಿರುವ ಹನುಮ ಮಾಲಾಧಾರಿಗಳು ಆಂಜನೇಯ ದರ್ಶನ ಪಡೆದು ನಂತರ ಮಾಲೆ ವಿಸರ್ಜನೆ ಮಾಡಲಿದ್ದಾರೆ.
ಗುಜರಾತ್ ಚುನಾವಣೆ: ಕಾನೂನು-ಸುವ್ಯವಸ್ಥೆ ಕಾಪಾಡಲು ಅಹಮದಾಬಾದ್ನಲ್ಲಿ ಮಹಿಳಾ ಸಿಆರ್ಪಿಎಫ್ ತಂಡ ನಿಯೋಜನೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಂಪಿ ಆನೆಗುಂದಿಯ ಅಂಜನಾದ್ರಿ ಬೆಟ್ಟಕ್ಕೆ ತೆರಳಲಿರುವ ಹನುಮ ಮಾಲಾಧಾರಿಗಳು ಆಂಜನೇಯ ದರ್ಶನ ಪಡೆದು ನಂತರ ಮಾಲೆ ವಿಸರ್ಜನೆ ಮಾಡಲಿದ್ದಾರೆ.ಈ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ತಿಳಿಸಿದರು.
ಈ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 2 ಡಿವೈಎಸ್ ಪಿ, 6 ಜನ ಸಿಪಿಐ, 13 ಸಬ್ ಇನ್ಸೆಪೆಕ್ಟರ್, 30 ಜನ ಎಎಸ್ಐ, 230 ಜನ ಪೇದೆಗಳು ಒಂದು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ವಿಡಿಯೋಗ್ರಫಿ ಗಸ್ತು ಪೊಲೀಸರು ಕೂಡ ಕಾವಲಿರಲಿದ್ದಾರೆ ಎಂದು ಮಾಹಿತಿ ನೀಡಿದರು.
BIGG NEWS : ದ್ವಿಚಕ್ರ ವಾಹನ ಸವಾರರೇ ಗಮನಿಸಿ : ಇನ್ಮುಂದೆ ಅರ್ಧ ಹೆಲ್ಮೆಟ್ ಧರಿಸಿದ್ರೆ 500 ರೂ.ದಂಡ!