ಮುಂಬೈ: 42 ವರ್ಷದ ಮಹಿಳೆಯೊಬ್ಬರ ಮನೆಗೆ ನುಗ್ಗಿದ ಮೂವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಸಿಗರೇಟ್ನಿಂದ ಆಕೆಯ ಖಾಸಗಿ ಭಾಗಗಳಿಗೆ ಸುಟ್ಟು ಗಾಯಗೊಳಿಸಿರುವ ಘಟನೆ ಬುಧವಾರ ಮುಂಜಾನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ.
ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಸಿಗರೇಟಿನಿಂದ ಆಕೆಯ ಖಾಸಗಿ ಅಂಗಗಳನ್ನು ಸುಟ್ಟು, ಎದೆ ಮತ್ತು ಎರಡೂ ಕೈಗಳ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದು, ಈ ವಿಷಯವನ್ನು ಯಾರಿಗಾದ್ರೂ ಹೇಳಿದ್ರೆ, ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಮಹಿಳೆಯು ತನ್ನ ನೆರೆಹೊರೆಯವರಿಗೆ ತನ್ನ ಸಂಕಟವನ್ನು ವಿವರಿಸಿದ ನಂತ್ರ ವಿಷಯ ಬೆಳಕಿಗೆ ಬಂದಿದೆ. ನಂತ್ರ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆಯುತ್ತಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುರ್ಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
BIG NEWS : ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ಕಟ್ಟಡ ನಿರ್ಮಾಣ, ಡೆಮಾಲಿಷನ್ ಚಟುವಟಿಕೆಗಳಿಗೆ ಸರ್ಕಾರದಿಂದ ಬ್ರೇಕ್
BIGG NEWS : ಶೀಘ್ರವೇ ರಾಜ್ಯಾದ್ಯಂತ 437 `ನಮ್ಮ ಕ್ಲಿನಿಕ್’ ಆರಂಭ : ಸಿಎಂ ಬಸವರಾಜ ಬೊಮ್ಮಾಯಿ
BIG NEWS : ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ಕಟ್ಟಡ ನಿರ್ಮಾಣ, ಡೆಮಾಲಿಷನ್ ಚಟುವಟಿಕೆಗಳಿಗೆ ಸರ್ಕಾರದಿಂದ ಬ್ರೇಕ್