ಹಾಸನ : ಮೈಸೂರು, ಬೆಂಗಳೂರು, ಬಳ್ಳಾರಿಯಲ್ಲಿ ಜನರಿಗೆ ಚಿರತೆ ಆತಂಕ ಶುರುವಾಗಿದೆ. ಕಾಡಿನಿಂದ ನಾಡಿಗೆ ಬರುತ್ತಿರುವ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ. ಇದರ ನಡುವೆ ಹಾಸನದಲ್ಲಿ ಬೃಹತ್ ಜಾಲವೊಂದನ್ನು ಭೇದಿಸಿರುವ ಪೊಲೀಸರು ಚಿರತೆ ಬೇಟೆಯಾಡುತ್ತಿದ್ದ ಐವರನ್ನು ಬಂಧಿಸಿದ್ದಾರೆ.
ಇಲ್ಲಿನ ಸಮೀಪದ ಕೋಮಾರನಹಳ್ಳಿಯ ರವಿ, ಹಾಗೂ ಚಿಕ್ಕನಾಯಕನಹಳ್ಳಿಯ ಮೋಹನ್, ಅರಸೀಕೆರೆ ತಾಲ್ಲೂಕಿನ ಜಾವಗಲ್ ಮೂಲದ ಉಂಡಿಗನಾಳು ಗ್ರಾಮದ ಸ್ವಾಮಿ ಎಂಬುವವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನ ಬಂದಿಸಿದ್ದಾರೆ, ಉರುಳು ಹಾಕಿ ಚಿರತೆಯನ್ನು ಕೊಂದ ಆರೋಪಿಗಳು ನಂತರ ಅದರ ಉಗುರು, ಹಲ್ಲು ಕಿತ್ತು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಅದೇ ರೀತಿ ಮಾಲೂರು ತಾಲ್ಲೂಕಿನ ಮಾದಿಹಳ್ಳಿಯಲ್ಲಿಯೂ ಒಂದು ಚಿರತೆಯನ್ನ ಕೊಂದು ಹಲ್ಲು, ಉಗುರು ಮಾರಾಟ ಮಾಡಲು ಯತ್ನಿಸಿದ್ದ ಮತ್ತಿಬ್ಬರು ಆರೋಪಿಗಳನ್ನ ಬಂದಿಸಲಾಗಿದೆ. ಮಾದಿಹಳ್ಳಿಯ ಮಂಜೇಗೌಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಲದ ರೇಣುಕುಮಾರ್ ಎಂಬ ಆರೋಪಿಗಳನ್ನ ಬಂದಿಸಲಾಗಿದೆ. ಚಿರತೆಗಳ ಉಗುರು, ಹಲ್ಲು, ಹಾಗೂ ಅದರ ಮೂಳೆಗಳಿಗೆ ಬಾರೀ ಡಿಮ್ಯಾಂಡ್ ಇದ್ದು, ಇದನ್ನು ಮಾರಿ ಆರೋಪಿಗಳು ಲಕ್ಷಾಂತರ ಹಣ ಸಂಪಾದಿಸುವ ಪ್ಲ್ಯಾನ್ ಹಾಕಿದ್ದರು.
ಶೀಘ್ರವೇ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಲಿವೆ – ಗೌರವಾಧ್ಯಕ್ಷ ಆಯನೂರು ಮಂಜುನಾಥ್
‘ಕಾಂಗ್ರೆಸ್ ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ’ : ಟ್ವೀಟ್ ನಲ್ಲಿ ಕಿಡಿಕಾರಿದ ಬಿಜೆಪಿ