ನವದೆಹಲಿ: ದೇಶದಲ್ಲಿ 3 ತಿಂಗಳ ಸುದೀರ್ಘ ಪ್ರತಿಭಟನೆಗೆ ಕಾರಣವಾದ ದಶಕಗಳಷ್ಟು ಹಳೆಯದಾದ ಹಿಜಾಬ್ ಕಾನೂನನ್ನು ಸಂಸತ್ತು ಮತ್ತು ನ್ಯಾಯಾಂಗವು ಪರಿಶೀಲಿಸುತ್ತಿದೆ ಎಂದು ಇರಾನ್ನ ಅಟಾರ್ನಿ ಜನರಲ್ ಶನಿವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಹಿಜಾಬ್ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ನಂಬಲಾಗಿದೆ.ಈ ವರ್ಷದ ಸೆಪ್ಟೆಂಬರ್ನಲ್ಲಿ ಇರಾನ್ ದೇಶಾದ್ಯಂತ ಹಿಜಾಬ್ ವಿರೋಧಿಸಿ ಪ್ರಾರಂಭವಾದ ಪ್ರತಿಭಟನೆಗಳು ನಡೆದಿದ್ದವು.
1979 ರ ಕ್ರಾಂತಿಯ ನಂತರ ಇರಾನ್ನ ನಾಯಕರಿಗೆ ಅತಿದೊಡ್ಡ ಸವಾಲಾಗಿದೆ ಎಂದು ಪರಿಗಣಿಸಲಾಗಿದೆ. ಇರಾನ್ನ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಾಜೆರಿ, “ಕಾನೂನು ಯಾವುದೇ ಬದಲಾವಣೆಗಳ ಅಗತ್ಯವಿದೆಯೇ ಎಂಬುದರ ಬಗ್ಗೆ ಸಂಸತ್ತು ಮತ್ತು ನ್ಯಾಯಾಂಗ ಎರಡೂ ಕೆಲಸ ಮಾಡುತ್ತಿವೆ” ಎಂದು ತಿಳಿಸಿದ್ದಾರೆ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.ಪರಿಶೀಲನಾ ತಂಡವು ಸಂಸತ್ತಿನ ಸಾಂಸ್ಕೃತಿಕ ಆಯೋಗದೊಂದಿಗೆ ಬುಧವಾರ ಸಭೆ ಸೇರಿ ಒಂದು ಅಥವಾ ಎರಡು ವಾರಗಳಲ್ಲಿ ಫಲಿತಾಂಶಗಳನ್ನು ನೋಡಲಿದೆ ಎಂದು ಅಟಾರ್ನಿ ಜನರಲ್ ತಿಳಿಸಿದ್ದಾರೆ. ಏತನ್ಮಧ್ಯೆ, ಭದ್ರತಾ ಪಡೆಗಳ ಸಿಬ್ಬಂದಿ ಸೇರಿದಂತೆ 200 ಜನರು ಅಶಾಂತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಉನ್ನತ ರಾಜ್ಯ ಭದ್ರತಾ ಸಂಸ್ಥೆಯೊಂದು ಹೇಳಿದೆ, ಇದು ವಿಶ್ವ ಸಂಸ್ಥೆ ಮತ್ತು ಹಕ್ಕುಗಳ ಸಂಘಟನೆಗಳು ವರದಿ ಮಾಡಿದ ಸಂಖ್ಯೆಗಿಂತ ತುಂಬಾ ಕಡಿಮೆಯಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.