ನವದೆಹಲಿ: ಕಳೆದೆರಡು ವರ್ಷಗಳ ಹಿಂದೆ ತನ್ನ ಪತ್ನಿಯೊಂದಿಗೆ ಕ್ರೌರ್ಯದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಗೆ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸಿ ಟಿ ರವಿಕುಮಾರ್ ಅವರ ಪೀಠವು 2001 ರಲ್ಲಿ ಏನೇ ನಡೆದರೂ ಸೆಕ್ಷನ್ 498 ಎ ಅಡಿಯಲ್ಲಿ ಅಪರಾಧದ ಕ್ರಿಮಿನಲ್ ಪ್ರಕರಣವು 2006 ರಲ್ಲಿ ಖುಲಾಸೆಗೆ ಕಾರಣವಾಗಿದೆ. ಮೇಲ್ಮನವಿದಾರರಿಗೆ 2013-2014 ನೇ ಸಾಲಿನಲ್ಲಿ ನೇಮಕಾತಿಯನ್ನು ನಿರಾಕರಿಸಬಾರದು ಎಂದು ಹೇಳಿದರು.
ಮಧ್ಯಪ್ರದೇಶ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿನ ವಿರುದ್ಧ ಪ್ರಮೋದ್ ಸಿಂಗ್ ಕಿರಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.
ಏನಿದು ಪ್ರಕರಣ?
ಪ್ರಮೋದ್ ಸಿಂಗ್ ಕಿರಾರ್ ಎಂಬ ವ್ಯಕ್ತಿ 2013-2014ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದರು. ಆದ್ರೆ, ಪ್ರಮೋದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಹೀಗಾಗಿ, ಅವರಿಗೆ ಸರ್ಕಾರಿ ಉದ್ಯೋಗವನ್ನು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್ ವಿಭಾಗೀಯ ಪೀಠ ಮೆಟ್ಟಿಲೇರಿದ್ದ ಪ್ರಮೋದ್ಗೆ ಅಲ್ಲಿಯೂ ಕೂಡ ನಿರಾಸೆಯಾಗಿತ್ತು.
ನಂತ್ರ, ಸುಪ್ರೀಂ ಮೊರೆ ಹೋದ ಪ್ರಮೋದ್ಗೆ ನ್ಯಾಯ ಸಿಕ್ಕಿದೆ. 2016ರಲ್ಲಿ ಪತಿ ಮತ್ತು ಪತ್ನಿ ಇಬರೂ ತಮ್ಮ ಒಪ್ಪಂದದ ಮೇರೆಗೆ ರಾಜಿಯಾಗಿದ್ದನ್ನು ಕೋರ್ಟ್ ಗಮನಿಸಿದೆ. ಹೀಗಾಗಿ, 2013-2014ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿರುವ ವ್ಯಕ್ತಿಗೆ ಉದ್ಯೋಗ ನಿರಾಕರಿಸುವುದು ಸೂಕ್ತವಲ್ಲ ಎಂದು ಸುಪ್ರೀಂ ಹೇಳಿದೆ.
BIGG NEWS : ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನ 250 ವಾರ್ಡ್ಗಳಿಗೆ ಚುನಾವಣೆ, ಮತದಾನ ಪ್ರಾರಂಭ
BIGG NEWS : ಸೂಕ್ತ ಚಿಕಿತ್ಸೆ ಸಿಗದೇ 5 ವರ್ಷದ ಮಗು ಸಾವು ಪ್ರಕರಣ : ಆಸ್ಪತ್ರೆಯ ವೈದ್ಯ, ಆ್ಯಂಬುಲೆನ್ಸ್ ಚಾಲಕ ಅಮಾನತು
BIGG NEWS : ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನ 250 ವಾರ್ಡ್ಗಳಿಗೆ ಚುನಾವಣೆ, ಮತದಾನ ಪ್ರಾರಂಭ