ಶಿವಮೊಗ್ಗ : ಜೈಲಿನಲ್ಲಿ ಗಾಂಜಾ ಸೇವಿಸಿ ವಿಚಾರಣಾಧೀನ ಕೈದಿ ಅಸ್ವಸ್ಥನಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿದ್ದ ಶಾಹೀದ್ ಖುರೇಷಿ ಎಂಬಾತ ಗಾಂಜಾ ಸೇವಿಸಿ ಅಸ್ವಸ್ಥನಾಗಿದ್ದಾನೆ ಎನ್ನಲಾಗಿದೆ.
ಅಸ್ವಸ್ಥಗೊಂಡ ಕೈದಿಯ ಜೇಬು ಪರಿಶೀಲನೆ ಮಾಡಿದಾಗ ಆತನ ಜೇಬಿನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ಪೊಲೀಸರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿ ವಾಪಸ್ ಕರೆದುಕೊಂಡು ಬಂದಿದ್ದಾರೆ. ಇನ್ನೂ, ಗಾಂಜಾ ಪತ್ತೆಯಾದ ಕಾರಣ ಆತನ ವಿರುದ್ಧ ಮತ್ತೆ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಶಾಹಿದ್ ನನ್ನು ಬಂಧಿಸಲು ಹೋದ ಪೊಲೀಸ್ ಪೇದೆ ಗುರುನಾಯಕ್ ಹಾಗೂ ಇನ್ನೋರ್ವ ಸಿಬ್ಬಂದಿ ರಮೇಶ್ ಎಂಬುವವರ ಮೇಲೆ ಈತ ಚಾಕು ಇರಿದಿದ್ದನು. ಜೂ.21 ರಂದು ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ಘಟನೆ ನಡೆದಿತ್ತು.
ಮಾನವೀಯತೆ ಮರೆತ ಕ್ರೂರಿಗಳು ; ಒಂಟಿಯಾಗಿ ‘ಶಾಪಿಂಗ್’ ಹೋದ ಮಹಿಳೆಗೆ ಕ್ರೂರ ಶಿಕ್ಷೆ, ಕೋಲಿನಿಂದ ಹೊಡೆದು ಚಿತ್ರಹಿಂಸೆ
BREAKING NEWS : ದತ್ತಪೀಠಕ್ಕೆ ಇಬ್ಬರು ‘ಹಿಂದೂ ಅರ್ಚಕ’ರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ |Datta Peeta