ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದತ್ತ ಮತದಾರರನ್ನುಸೆಳೆಯಲು ಕಾಂಗ್ರೆಸ್ನಿಂದ ಹೊಸ ಡಿಜಿಟಲ್ ಕ್ಯಾಂಪೇನ್ ಶುರು ಮಾಡಿದೆ, ಬಿಜೆಪಿ ವಿರುದ್ಧ #DeleteBJPNotVoterID ಎಂಬ ಡಿಜಿಟಲ್ ಅಭಿಯಾನ ರಾಜ್ಯ ಕಾಂಗ್ರೆಸ್ ಆರಂಭಿಸಿದೆ.
SHOCKING NEWS: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿದ ಎಚ್ಎಂ, ಪ್ರಕರಣ ದಾಖಲು
ಬೆಂಗಳೂರಲ್ಲಿ 6.6 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಸಂಬಂಧ ಮತದಾರರ ಪಟ್ಟಿ ಪರಿಶೀಲಿಸಲು ಚುನಾವಣಾ ಆಯೋಗ ಮನವಿ ಮಾಡಿದೆ ಹೀಗಾಗಿ ವೋಟರ್ ಐಡಿ ಡೇಟಾ ಇದೆಯಾ ಇಲ್ಲವಾ ಎಂದು ಪರಿಶೀಲಿಸಲು ಮತದಾರರಿಗೆ ಜಾಗೃತಿ ಮೂಡಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್, ಡಿಜಿಟಲ್ ಮೂಲಕವೇ ಬೆಂಗಳೂರು ಮತದಾರರ ಸೆಳೆಯಲು ಯೋಜನೆ ಹಾಕಿಕೊಂಡಿದೆ.
SHOCKING NEWS: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿದ ಎಚ್ಎಂ, ಪ್ರಕರಣ ದಾಖಲು
ವಾಟ್ಸ್ಆ್ಯಪ್, ಫೇಸ್ಬುಕ್ ಡಿಜಿಟಲ್ ವೇದಿಕೆ ಮೂಲಕ 10 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಲು ನಿರ್ಧರಿಸಲಾಗಿದೆ. ಮತದಾರ ಪಟ್ಟಿಯಲ್ಲಿ ಹೆಸರಿದೆಯಾ ಇಲ್ಲವಾ ಎಂಬುದನ್ನ ತಿಳಿಯಲು ಲಿಂಕ್ ಅನ್ನು ಕೂಡ ಹಂಚಿಕೊಂಡಿದೆ.
“ಬಿಜೆಪಿಯ ಘನಂಧಾರಿ ಕೆಲಸಕ್ಕೆ, ಮೇಲಿನ ಫೋಟೋ ರೀತಿ ನಿಮ್ಮ ವೋಟರ್ ಐಡಿ ಕೂಡ ಈಗ ಕ್ಷಣದಲ್ಲಿ ಕಣ್ಮರೆಯಾಗಬಹುದು, ಬಿಜೆಪಿಯ ಈ ಕೀಳು ರಾಜಕೀಯದ ಬಗ್ಗೆ ಎಚ್ಚರದಿಂದಿರಿ.
SHOCKING NEWS: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿದ ಎಚ್ಎಂ, ಪ್ರಕರಣ ದಾಖಲು
ನಿಮ್ಮ ವೋಟರ್ ಐಡಿಯನ್ನೂ ಬಿಡದವರು, ನಿಮ್ಮನ್ನು ಬಿಟ್ಟಾರೆಯೇ? ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ, ಬದಲಾಗಿದ್ದರೆ ಅಥವಾ ಯಾವುದೇ ತಪ್ಪುಗಳಾಗಿದ್ದರೂ ಕೂಡಲೇ ಆಕ್ಷೇಪಣೆ ಸಲ್ಲಿಸಿ.
ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ – https://electoralsearch.in/ ಜನಹಿತಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ನಿಂದ ಜಾರಿ” ಎಂಬ ಪೋಸ್ಟ್ ಅನ್ನು ಹಂಚಿಕೊಂಡು ಅದರಲ್ಲಿ #DeleteBJPNotVoterID ಎಂಬ ಹ್ಯಾಷ್ಟ್ಯಾಗ್ ಹಾಕಿದೆ.
SHOCKING NEWS: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿದ ಎಚ್ಎಂ, ಪ್ರಕರಣ ದಾಖಲು