ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ನಿನ್ನೆ ಸಂಜೆ 7.32 ರ ಸುಮಾರಿಗೆ ಸುಳ್ಯ ತಾಲೂಕಿನ ಮಡುಪ್ಪಾಡಿ, ಕಡ್ಯ, ಹಾಡಿಕಲ್ಲು ಗ್ರಾಮದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದ ಬಗ್ಗೆ ಭೂವಿಜ್ಞಾನ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಕಳೆದ ಕೆಲವು ತಿಂಗಳ ಹಿಂದೆ ಸುಳ್ಯ ತಾಲೂಕಿನ ಪದೇ ಪದೇ ಭೂಕಂಪನದ ಅನುಭವವಾಗಿತ್ತು. ಬಳಿಕ ಇದೀಗ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
BIGG NEWS : ರಾಜ್ಯದಲ್ಲಿ ಮಾರ್ಚ್ ವೇಳೆಗೆ `ಡಿಜಿಟಲ್ ಪದವಿ ಕೋರ್ಸ್’ ಪ್ರಾರಂಭ : ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ