ಬಳ್ಳಾರಿ : ಹುಚ್ಚುನಾಯಿ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚು ನಾಯಿ ದಾಳಿಗೆ 3 ವರ್ಷದ ಸುರಕ್ಷಿತಾ ಹಾಗೂ 7 ವರ್ಷದ ಶಾಂತಕುಮಾರ್ ಮೃತಪಟ್ಟಿದ್ದಾರೆ. ಮಕ್ಕಳು ಆಟವಾಡುತ್ತಿದ್ದಾಗ ದಾಳಿ ಮಾಡಿದ್ದ ನಾಯಿ, ಸುರಕ್ಷಿತಾಳ ಮುಖಕ್ಕೆ ಹಾಗೂ ಶಾಂತಕುಮಾರ್ ಕೈಗೆ ಕಚ್ಚಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ನವೆಂಬರ್ 21ರಂದು ಮೃತಪಟ್ಟಿದ್ದಳು. ಶಾಂತಕುಮಾರ್ ನವಂಬರ್ 22ರಂದು ಸಾವನ್ನಪ್ಪಿದ್ದಾನೆ.
ಸ್ನೇಹಿತರ ಮಾತು ಕೇಳಿ ವಧುವಿಗೆ ಚುಂಬಿಸಿದ ವರ… ಮದುವೆಯನ್ನೇ ರದ್ದುಗೊಳಿಸಿದ ಮಧುಮಗಳು!