ಧಾರವಾಡ : ಸುಕನ್ಯಾ ಸಮೃದ್ಧಿ ಯೋಜನೆ ಕುರಿತಂತೆ ಹೆಣ್ಣು ಮಕ್ಕಳ ಪೋಷಕರಿಗೆ ಬಹುಮುಖ್ಯವಾದ ಮಾಹಿತಿಯೊಂದನ್ನು ನೀಡಲಾಗಿದ್ದು, 18 ವರ್ಷ ತುಂಬುವ ಖಾತೆದಾರು ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಕೋರಲಾಗಿದೆ.
BIGG NEWS : `ಸುಶಾಸನ ಮಾಸಾಚರಣೆ’ಗೆ ಸಚಿವ ಅಶ್ವತ್ಥ ನಾರಾಯಣ ಚಾಲನೆ : 5 ಕಂಪನಿಗಳ ಜೊತೆಗೆ ಉದ್ಯೋಗ ಸೃಷ್ಟಿ ಒಪ್ಪಂದ
ಸುಕನ್ಯಾ ಸಮೃದ್ಧಿ ಯೋಜನೆಯು 2015 ಜ. 22 ಕ್ಕೆ ಜಾರಿಗೆ ಬಂದಿತ್ತು. ಆಗ 10 ವರ್ಷ ವಯಸ್ಸಿನಲ್ಲಿ ಈ ಖಾತೆ ತೆರೆದ ಹೆಣ್ಣು ಮಕ್ಕಳಿಗೆ ಮುಂದಿನ ತಿಂಗಳು 18 ವರ್ಷ ಪೂರ್ಣಗೊಳ್ಳುತ್ತಿದೆ. ಈ ವರ್ಷ 18 ವರ್ಷ ತಲುಪುವ ಖಾತೆದಾರರು, ಖಾತೆಯನ್ನು ಪ್ರೌಢ ವಯಸ್ಕ ಖಾತೆಯಾಗಿ ಪರಿವರ್ತಿಸಲು, ತಮ್ಮ ಖಾತೆ ಹೊಂದಿರುವ ಅಂಚೆ ಕಚೇರಿಗೆ ಅಥವಾ ತಮ್ಮ ಈಗಿನ ವಾಸ ಸ್ಥಳದ ಸಮೀಪದ ಅಂಚೆ ಕಚೇರಿಗೆ ತೆರಳಿ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಈ ಅರ್ಜಿ ಫಾರ್ಮ ಅಂಚೆ ಕಚೇರಿಯಲ್ಲಿ ಲಭ್ಯವಿದೆ ಎಂದು ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.