ನವದೆಹಲಿ : ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಐಸಿಎಸ್ಇ 10ನೇ ತರಗತಿ ಮತ್ತು ಐಎಸ್ಸಿ 12ನೇ ತರಗತಿ ಬೋರ್ಡ್ ಪರೀಕ್ಷೆಗಳು 2023ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಸಿಎಸ್ಇ 10ನೇ ತರಗತಿ ಪರೀಕ್ಷೆಗಳು ಫೆಬ್ರವರಿ 27 ರಿಂದ ಮತ್ತು ಐಎಸ್ಸಿ 12ನೇ ತರಗತಿ ಫೆಬ್ರವರಿ 13ರಿಂದ ನಡೆಯಲಿವೆ. ಐಸಿಎಸ್ಇ ತರಗತಿ 10 ಮತ್ತು ಐಎಸ್ಸಿ ತರಗತಿ 12 ಬೋರ್ಡ್ ಪರೀಕ್ಷೆಗಳು 2023ರ ವೇಳಾಪಟ್ಟಿ ಸಿಐಎಸ್ಸಿಇ ಅಧಿಕೃತ ವೆಬ್ಸೈಟ್ cisce.org ನಲ್ಲಿ ಬಿಡುಗಡೆ ಮಾಡಲಾಗಿದೆ.
ಐಎಸ್ಸಿ 12ನೇ ತರಗತಿ ಬೋರ್ಡ್ ಪರೀಕ್ಷೆ ಫೆಬ್ರವರಿ 13ರಿಂದ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 31 ರವರೆಗೆ ಮುಂದುವರಿಯುತ್ತದೆ. ಐಎಸ್ಸಿ ಬೋರ್ಡ್ ಪರೀಕ್ಷೆಯು ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತದೆ. ಐಎಸ್ಸಿ 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಪ್ರತಿ ಪರೀಕ್ಷೆಗೆ ಮೂರು ಗಂಟೆಗಳ ಕಾಲಾವಕಾಶವನ್ನ ನೀಡಲಾಗುತ್ತದೆ.
BIGG NEWS : ‘ಆಟೋ ಡ್ರೈವರ್’ ಸೇರಿ ಹಲವರ ಹತ್ಯೆಗೆ ಸಂಚು ರೂಪಿಸಿದ್ದ ಶಾರೀಖ್ : ಸ್ಪೋಟಕ ಮಾಹಿತಿ ಬಯಲು
BREAKING NEWS : ‘ಪ್ರಮೋದ್ ಮುತಾಲಿಕ್’ ಗೆ ಜೀವ ಬೆದರಿಕೆ ಸಂದೇಶ : ದೂರು ದಾಖಲು