ಬೆಂಗಳೂರು : ಬಡವರ ಮಕ್ಕಳನ್ನು ಬೆಳೆಯಲು ಬಿಜೆಪಿ ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ನಲ್ಲಿ ಕಿಡಿಕಾರಿದ ಕಾಂಗ್ರೆಸ್ ಪರಿಶಿಷ್ಟ, ಒಬಿಸಿ, ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿ ವೇತನದ ಅನುದಾನದ ಮೊತ್ತವನ್ನು ಕಡಿತಗೊಳಿಸುತ್ತಿದ್ದ ಬಿಜೆಪಿ ಸರ್ಕಾರ ಈಗ ಸಂಪೂರ್ಣ ಸ್ಥಗಿತಗೊಳಿಸಿದೆ. ದಲಿತ, ಹಿಂದುಳಿದ ವರ್ಗದವರನ್ನು ಶಿಕ್ಷಣದಿಂದ ದೂರ ಇಡುವ ಮನುವಾದಿ ಸಂಘಪರಿವಾರದ ಅಜೆಂಡಾವನ್ನು ಬಿಜೆಪಿ ಪಾಲಿಸುತ್ತಿದೆ. ಬಡವರ ಮಕ್ಳನ್ನು ಬೆಳೆಯಲು ಬಿಡದಿರುವುದೇಕೆ ಬಿಜೆಪಿ? ಎಂದು ವಾಗ್ಧಾಳಿ ನಡೆಸಿದೆ.
ಇನ್ನೊಂದು ಟ್ವೀಟ್ ನಲ್ಲಿ ದಲಿತರ ಏಳಿಗೆಗಾಗಿ ನಮ್ಮ ಸರ್ಕಾರ SCSP/TSP ನಿಧಿ ಸ್ಥಾಪಿಸಿ ಐತಿಹಾಸಿಕ ನಿರ್ದಾರ ಕೈಗೊಂಡಿತ್ತು. ಈಗ ಬಿಜೆಪಿ ಆಡಳಿತದಲ್ಲಿ ಈ ಅನುದಾನವನ್ನು ಬೇರೆಡೆ ವರ್ಗಾಯಿಸಿತ್ತು , ಅನುದಾನ ಮೊತ್ತವನ್ನು ಕಡಿತಗೊಳಿಸಿತ್ತು , ಅಲ್ಪ ಅನುದಾನವನ್ನೂ ಬಳಕೆ ಮಾಡಲಿಲ್ಲ ಬಿಜೆಪಿಗೆ ದಲಿತರು ಏಳಿಗೆಯಾಗುವುದು ಸಹಿಸಲಾಗದ ವಿಷಯ ಎಂಬುದು ಸ್ಪಷ್ಟ ಎಂದು ಕಿಡಿಕಾರಿದೆ.
ಪರಿಶಿಷ್ಟ, ಒಬಿಸಿ, ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿ ವೇತನದ ಅನುದಾನದ ಮೊತ್ತವನ್ನು ಕಡಿತಗೊಳಿಸುತ್ತಿದ್ದ ಬಿಜೆಪಿ ಸರ್ಕಾರ ಈಗ ಸಂಪೂರ್ಣ ಸ್ಥಗಿತಗೊಳಿಸಿದೆ.
ದಲಿತ, ಹಿಂದುಳಿದ ವರ್ಗದವರನ್ನು ಶಿಕ್ಷಣದಿಂದ ದೂರ ಇಡುವ ಮನುವಾದಿ ಸಂಘಪರಿವಾರದ ಅಜೆಂಡಾವನ್ನು ಬಿಜೆಪಿ ಪಾಲಿಸುತ್ತಿದೆ.
ಬಡವರ ಮಕ್ಳನ್ನು ಬೆಳೆಯಲು ಬಿಡದಿರುವುದೇಕೆ ಬಿಜೆಪಿ? pic.twitter.com/CP8J4qmXa3
— Karnataka Congress (@INCKarnataka) December 1, 2022
Vastu tips : ಮನೆಯಲ್ಲಿ ಇತರರಿಂದ ಪಡೆದ ಈ ವಸ್ತುಗಳನ್ನು ಬಳಸಬೇಡಿ, ಇದರಿಂದ ಆರ್ಥಿಕ ನಷ್ಟ ಗ್ಯಾರೆಂಟಿ!
BIG NEWS: ಬೆಸ್ಕಾಂನಿಂದ 24 ಗಂಟೆ ‘ವೆಬ್ ಪೋರ್ಟಲ್’ ಸೇವೆ ಪುನರಾರಂಭ: ಈ ಎಲ್ಲಾ ಸೌಲಭ್ಯ ಆನ್ ಲೈನ್ ನಲ್ಲೇ ಲಭ್ಯ